HEALTH TIPS

ಇಂದು ಉಷ್ಣಾಂಶ ಗರಿಷ್ಟ ಮಟ್ಟದಲ್ಲಿ ಹೆಚ್ಚಳ : ಎಚ್ಚರಿಕೆ

ತಿರುವನಂತಪುರ: ಕಾಸರಗೋಡು, ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಮಲ್ಪಪ್ಪುರಂ, ಕೋಯಿಕೋಡ್, ಕಣ್ಣೂರು ಜಿಲ್ಲೆಗಳಲ್ಲಿ ಇಂದು(ಏ.5) ಉಷ್ಣಾಂಶ ಗರಿಷ್ಠ ಮಟ್ಟದಲ್ಲಿ ಹೆಚ್ಚಳಗೊಳ್ಳಲಿದೆ ಎಂದು ಕೇಂದ್ರ ಹವಾಮಾನ ವರದಿ ತಿಳಿಸಿದೆ. ಆಲಪ್ಪುಳ, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಉಷಣಾಂಶ ಸರಾಸರಿಯಿಂದ 3 ಡಿಗ್ರಿ ವರೆಗೆ ಹೆಚ್ಚಳಗೊಳ್ಳುವುದಕ್ಕೆ ಸಾಧ್ಯತೆಗಳಿವೆ. ಮುಂದಿನ ದಿನಗಲಲ್ಲಿ ಇದು ಇನ್ನೂ ಹೆಚಾಗುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಸೂರ್ಯತಾಪ ಉಂಟಾಗದಂತೆ ಸಾರ್ವಜನಿಕರು ಈ ಕೆಳಗೆ ತಿಳಿಸಲಾದ ವಿಚಾರದಲ್ಲಿ ಗಮನಹರಿಸಬೇಕು. 1. ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನೇರವಾಗಿ ಬಿಸಿಲು ತಾಗದಂತೆ ನೋಡಿಕೊಳ್ಳಬೇಕು. 2. ಡೀ ಹೈಡ್ರೇಷನ್ ನಡೆಯದಂತೆ ಕುಡಿಯುವ ನೀರು ಸದಾ ಜೊತೆಗಿರುವಂತೆ ನೋಡಿಕೊಳ್ಳಬೇಕು. 3. ರೋಗಿಗಳು ಬೆಳಗ್ಗೆ 11ರಿಂದ ಮಧ್ಯಾಹ್ನ 3 ವರೆಗೆ ನೇರ ಬಿಸಿಲಿಗೆ ತೆರಳಬಾರದು. 4. ಗರಿಷ್ಠ ಪ್ರಮಾಣದಲ್ಲಿ ಶುದ್ಧಜಲ ಸೇವಿಸಬೇಕು. ಮದ್ಯಪಾನ, ಕಾಫಿ, ಚಹಾ ಹಗಲು ಹೊತ್ತು ಸೇವಿಸಬಾರದು. ಠಿ-4 5.ಸಡಿಲ, ತಿಳಿಬಣ್ಣದ, ಹತ್ತಿ ಬಟ್ಟೆಯ ಉಡುಪುಗಳನ್ನೇ ಧರಿಸಬೇಕು. 6.ವಯೋವೃದ್ಧರು, ಗರ್ಭಿಣಿಯರು ಬಿಸಿಲು ತಾಗದಂತೆ ನೋಡಿಕೊಳ್ಳಬೇಕು. 7.ಕಾರ್ಮಿಕರು ಸೂರ್ಯತಾಪಕ್ಕ ಒಳಗಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು. 8.ಕಾರ್ಮಕರ ದುಡಿಮೆಯ ಅವಧಿ ಪುನರ್ ಕ್ರಮೀಕರಿಸಬೇಕು. ಕಾರ್ಮಿಕ ಇಲಾಖೆ ತಿಲಿಸಿದ ಆದೇಶ ಪಾಲಿಸಬೇಕು. 9.ದ್ವಿಚಕ್ರವಾಹನಗಳಲ್ಲಿ ಮಧ್ಯಾಹ್ನ ಭೋಜನ ವಿತರಣೆ ನಡೆಸುವವರ ಸುರಕ್ಷೆ ಕುರಿತು ಆಯಾ ಸಂಸ್ಥೆಗಳು ಜಾಗರೂಕತೆ ಪಾಲಿಸಬೇಕು. ಪರಿಸ್ಥಿಗೆ ಪೂರಕ ವಸ್ತ್ರಧಾರಣೆಗೆ ಯಾತ್ರೆಯ ನಡುವೆ ಅವರಿಗೆ ವಿಶ್ರಾಂತಿಗೆ ಅವಧಿ ಒದಗಿಸಬೇಕು. 10. ಚುನಾವಣೆ ಅವಧಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಜಾಗರೂಕತೆ ವಹಿಸಬೇಕು. ವಿದ್ಯಾರ್ಥಿಗಳ ವಿಚಾರದಲ್ಲಿ ಶಿಕ್ಷಕರು, ಪೋಷಕರು ಪಾಲಿಸಬೇಕಾದ ಕ್ರಮಗಳು: 1. ರಜೆದಿನಗಳ ಹಿನ್ನೆಲೆಯಲ್ಲಿ ವಿನೋದಯಾತ್ರೆಗೆ ತೆರಳುವ ವೇಳೆ ಮಕ್ಕಳು ನೇರವಾಗಿ ಬಿಸಿಲಿಗೆ ಮೈಯೊಡ್ಡದಂತೆ ನೋಡಿಕೊಳ್ಳಬೇಕು. 2. ಅತೀವ ಜಾಗ್ರತೆ ಹಿನ್ನೆಲೆಯ ದಿನಗಳಲ್ಲಿ ರಜೆ ದಿನಗಳ ತರಗತಿಗಳನ್ನು ಕೈಬಿಡಬೇಕು. 3. ಅಂಗನವಾಡಿಯಲ್ಲಿ ಮಕ್ಕಳಿಗೆ ಬಿಸಲು ತಾಗದಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries