ಕಾಸರಗೋಡು: ಲೋಕಸಭೆ ಚುನಾವಣೆಯ ಅಂಗವಾಗಿ ಮತಯಂತ್ರಗಳಲ್ಲಿ ಬ್ಯಾಲೆಟ್ ಪೇಪರ್‍ಗಳ ಕ್ರಮೀಕರಣ ಆಯಾ ಉಪ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಪೂರ್ತಿಗೊಳಿಸಲಾಯಿತು. ಕಾಸರಗೋಡು, ಕಾಂಞಂಗಾಡ್, ಪಯ್ಯನ್ನೂರು, ಮಾಡಾಯಿ ಸ್ಥಳಗಳಲ್ಲಿ ಮತಯಂತ್ರಗಳಲ್ಲಿ ಬ್ಯಾಲೆಟ್ ಪೇಪರ್ ಕ್ರಮೀಕರಣ ಪ್ರಕ್ರಿಯೆ ಆಯೋಜಿಸಲಾಗಿತ್ತು.
ಮಂಜೇಶ್ವರ, ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳಲ್ಲಿ ಬ್ಯಾಲೆಟ್ ಪೇಪರ್‍ಗಳ ಕ್ರಮೀಕರಣ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ಉಸ್ತುವಾರಿಯಲ್ಲಿ ನಡೆಯಿತು.
ಆಯಾ ಉಪಚುನಾವಣಾಧಿಕಾರಿಗಳಾದ ಉಪಜಿಲ್ಲಾಧಿಕಾರಿ ಎಸ್.ಎನ್.ಸಜಿ ಕುಮಾರ್, ಅಬ್ದುಲ್ ಸಮದ್, ಮಾವಿಲ ನಳಿನಿ ಅವರ ನೇತೃತ್ವದಲ್ಲಿ ನಡೆಯಿತು. ಕಾಂಞಂಗಾಡ್, ತೃಕ್ಕರೀಪುರ ವಿಧಾನಸಭಾ ಕ್ಷೇತ್ರಗಳಲ್ಲಿನ ಪಡನ್ನಕ್ಕಾಡು ನೆಹರೂ ಕಾಲೇಜಿನಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಪಿ.ಆರ್.ರಾಧಿಕಾ ಅವರ ನೇತೃತ್ವದಲ್ಲೂ, ಪಯ್ಯನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಎಕೆಎಎಸ್‍ಜಿಎಚ್‍ಎಸ್‍ಎಸ್ ಪಯ್ಯನ್ನೂರಿನಲ್ಲಿ ಉಪಚುನಾವಣಾಧಿಕಾರಿ ಸಿಜಿ ಹರಿಕುಮಾರ್ ಅವರ ನೇತೃತ್ವದಲ್ಲಿ ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿನ ಕ್ರಮೀಕರಣ ಮಾಡಾಯಿ ಗಲ್ರ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉಪಚುನಾವಣಾಧಿಕಾರಿ ರಶೀದ್ ನೇತೃತ್ವದಲ್ಲಿ ಜರಗಿತು.
ಅಭ್ಯರ್ಥಿಗಳ ಪ್ರತಿನಿಧಿಗಳು ಬ್ಯಾಲೆಟ್ ಪೇಪರ್ ಕ್ರಮೀಕರಣ ಸಂದರ್ಭದಲ್ಲಿ ಭಾಗವಹಿಸಿದರು. ಬ್ಯಾಲೆಟ್ ಪೇಪರ್ ಕ್ರಮೀಕರಣ ಬಳಿಕ ಬ್ಯಾಲೆಟ್ ಯೂನಿಟ್‍ಗಳು ಪೆÇಲೀಸ್ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್‍ಗಳಲ್ಲಿ ಸಂರಕ್ಷಿಸಡಲಾಯಿತು.