ಮಂಜೇಶ್ವರ: ಕಡಂಬಾರು ಶ್ರೀಚೌಕಾರು ಮಂತ್ರವಾದಿ ಗುಳಿಗ ದೈವಸ್ಥಾನದ ವರ್ಷಾವಧಿ ಕೋಲ ಪರ್ವದ ಅಂಗವಾಗಿ ಶ್ರೀಚೌಕಾರು ಮಂತ್ರವಾದಿ ಗುಳಿಗ ದೈವದ ನೇಮ ಭಾನುವಾರ ಸಂಜೆ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಶ್ರೀಶಾಸ್ತಾ ಫ್ರೆಮಡ್ಸ್ ಕಡಂಬಾರು ಇದರ ವಾರ್ಷಿಕೋತ್ಸವ ಏರ್ಪಡಿಸಲಾಯಿತು. ಸಂಘದ ಪ್ರಾಯೋಜಕತ್ವದಲ್ಲಿ ಸಸಿಹಿತ್ಲು ಶ್ರೀಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀಭಗವತೀ ಮಹಾತ್ಮ್ಯೆ ಪ್ರಸಂಗದ ತುಳು ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ನೇಮ ಪರ್ವಕ್ಕೆ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಆಗಮಿಸಿ ಶ್ರೀದೈವಗಳ ಆಶೀರ್ವಾದ ಪಡೆದರು.