ಕಾಸರಗೋಡು: ಅಂತಾರಾಷ್ಟ್ರೀಯ ಉಗ್ರರ ಸಂಘಟನೆಯಾದ ಐಸಿಸ್ ಕಾಸರಗೋಡು ಜಿಲ್ಲೆಯಲ್ಲೂ ತಳವೂರುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಶ್ರೀಲಂಕಾ ಸ್ಪೋಟ ಸಂಬಂಧ ಎನ್‍ಐಎ ಕಾಸರಗೋಡಿನ ವಿದ್ಯಾನಗರ ಮತ್ತು ಸೂರ್ಲಿನ ಎರಡು ಮನೆಗಳಿಗೆ ದಾಳಿ ನಡೆಸಿ ಮೊಬೈಲ್ ಫೆÇೀನ್‍ಗಳ ಸಹಿತ ಹಲವು ದಾಖಲೆ ಪತ್ರಗಳನ್ನು ವಶಪಡಿಸಿದ್ದು ಎಂದು ಹಿಂದೂ ಐಕ್ಯ ವೇದಿಕೆ ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಟಿ.ವಿ.ಶಿಬಿನ್ ತೃಕ್ಕರಿಪುರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವದ ಎಲ್ಲಿ ಉಗ್ರರ ದಾಳಿ ನಡೆದರೂ ಅದರಲ್ಲೋರ್ವ ಮಲಯಾಳಿ ಇದ್ದಾನೆಂಬುದು ಅದರಲ್ಲೂ ಕಾಸರಗೋಡಿನ ವ್ಯಕ್ತಿ ಇದ್ದಾನೆಂಬುದು ತೀವ್ರ ಆತಂಕಕಾರಿಯಾಗಿದೆ. ಕೇರಳದಲ್ಲಿ ಉಗ್ರರ ನಂಟು ಹೊಂದಿರುವ ಹಲವು ಮಂದಿ ಇದ್ದಾರೆಂಬುದಕ್ಕೆ ರಾಜ್ಯ ಸರಕಾರ ಮತ್ತು ಪೆÇಲೀಸ್ ಇಲಾಖೆಯ ವಿಫಲತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ. ಇದು ಕೇರಳ ಉಗ್ರರ ಕೇಂದ್ರವಾಗಿ ಬದಲಾಗಲು ಪ್ರಚೋದನೆ ನೀಡುತ್ತಿದೆ ಎಂದಿದ್ದಾರೆ.
ಎರಡು ವರ್ಷಗಳ ಹಿಂದೆ ಸಿರಿಯಾಕ್ಕೆ ಹೋಗಿದ್ದ 21 ಮಲಯಾಳಿಗಳ ಪೈಕಿ 17 ಮಂದಿ ಕಾಸರಗೋಡಿನವರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರಕಾರದ ತುಷ್ಠೀಕರಣ ನೀತಿಯಾಗಿದೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯವನ್ನು ಉಗ್ರರ ಕೇಂದ್ರವನ್ನಾಗಿ ಬದಲಾಯಿಸಲು ನೆರವಾಗುತ್ತಿದೆ ಎಂದು ಅವರು ಆರೋಪಿಸಿರುವರು.
ಕೇಂದ್ರ ತನಿಖಾ ತಂಡ ಕೇರಳದ ಉಗ್ರರನ್ನು ವಶಕ್ಕೆ ತೆಗೆದುಕೊಂಡಾಗಲೇ ಕೇರಳ ಸರಕಾರಕ್ಕೂ, ಪೆÇಲೀಸರಿಗೂ ತಿಳಿಯಲು ಸಾಧ್ಯವಾಗುತ್ತದೆ ಎಂದರೆ ಈ ಬಗೆಗಿನ ತಾತ್ಸಾರ ಮನೋಭಾವವೇ ಕಾರಣ ಎಂದು ಅವರು ಬೊಟ್ಟು ಮಾಡಿದ್ದಾರೆ. ಸರಕಾರ ಮತ್ತು ಪೆÇಲೀಸರಿಗೆ ಈ ಬಗ್ಗೆ ತಿಳಿದಿದ್ದರೂ ಮೌನಕ್ಕೆ ಶರಣಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೇರಳ ಸರಕಾರ ಉಗ್ರರ ಬಗ್ಗೆ ಇರುವ ಸೌಮ್ಯ ನಿಲುವನ್ನು ಬದಲಾಯಿಸಿ ರಾಜ್ಯವನ್ನು ರಕ್ಷಿಸಬೇಕಾಗಿದೆ ಎಂದು ಹಿಂದೂ ಐಕ್ಯವೇದಿಕೆಯ ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಟಿ.ವಿ.ಶಿಬಿನ್ ತೃಕ್ಕರಿಪುರ ಆಗ್ರಹಿಸಿದ್ದಾರೆ.