ನವದೆಹಲಿ: ಮಕ್ಕಳ ಅಶ್ಲೀಲ ಚಿತ್ರಗಳನ್ನು ಪಸರಿಸುವವರ ಖಾತೆಗಳಿಗೆ ನಿಷೇಧ ಹೇರುವುದಾಗಿ ಪ್ರಸಿದ್ಧ ಸಾಮಾಜಿಕ ಮಾಧ್ಯಮವಾಗಿರುವ ವಾಟ್ಸಪ್ ಘೋಷಿಸಿದೆ. ಮಕ್ಕಳ ಅಶ್ಲೀಲ ಚಿತ್ರಗಳು ನೀಚತನದ್ದು. ಅದಕ್ಕೆ ವಾಟ್ಸಪ್ನಲ್ಲಿ ಜಾಗವಿಲ್ಲ. ಇಂತಹ ಪ್ರಕರಣಗಳನ್ನು ತನಿಖೆ ನಡೆಸಲು ಕಾನೂನುಬದ್ಧವಾಗಿ ತನಿಖಾ ಸಂಸ್ಥೆಗಳಿಂದ ಕೋರಿಕೆ ಬಂದರೆ ಅದನ್ನು ಪರಿಗಣಿಸುತ್ತೇವೆ ಎಂದು ಕಂಪನಿ ತಿಳಿಸಿದೆ.
ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ಯಾವ ಸಂದೇಶ ಕಳುಹಿಸುತ್ತಾನೆ ಎಂಬುದನ್ನು ನಾವು ನೋಡಲು ಆಗುವುದಿಲ್ಲ. ಬಳಕೆದಾರರು ನಿರ್ದಿಷ್ಟ ಖಾತೆ ನಿಷೇಧಿಸುವಂತೆ ಕೋರಿಕೆ ಇಟ್ಟರೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾಟ್ಸಪ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅತ್ಯಾಚಾರ, ಮಕ್ಕಳ ಅಶ್ಲೀಲ ವಿಡಿಯೋ ಹಾಗೂ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಕೇಂದ್ರ ಸರ್ಕಾರ ಹಾಗೂ ಗೂಗಲ್, ಮೈಕ್ರೋ ಸಾಫ್ಟ್, ಫೇಸ್‍ಬುಕ್‍ನಂತಹ ಇಂಟರ್ನೆಟ್ ಕಂಪನಿಗಳು ಒಮ್ಮತ ವ್ಯಕ್ತಪಡಿಸಿವೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಹೇಳಿತ್ತು. ಅದರ ಬೆನ್ನಿಗೇ ವಾಟ್ಸಪ್ನಿಂದ ಈ ಹೇಳಿಕೆ ಹೊರಬಿದ್ದಿದೆ.
ಸುಳ್ಳು ಸುದ್ದಿ ತಡೆಗೆ ಕ್ರಮ:
ಈ ನಡುವೆ, ವಾಟ್ಸಪ್ನಲ್ಲಿ ಸುಳ್ಳು ಸುದ್ದಿ ಹಬ್ಬುವುದಕ್ಕೆ ಕಡಿವಾಣ ಹಾಕಬೇಕು ಎಂಬ ವಿಚಾರವಾಗಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಭೇಟಿಯಾಗಿ ವಾಟ್ಸಪ್ ಅಧಿಕಾರಿಗಳು ಇತ್ತೀಚೆಗೆ ಸಮಾಲೋಚನೆ ನಡೆಸಿದ್ದರು. ಅಲ್ಲದೆ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ. ವಾಟ್ಸಪ್ನಲ್ಲಿನ ಸುಳ್ಳು ಸುದ್ದಿಗಳಿಂದಾಗಿ ಕಳೆದ ವರ್ಷ ಜನವರಿಯಿಂದ ಈವರೆಗೆ 30 ಜನರು ಜೀವ ತೆತ್ತಿದ್ದಾರೆ ಎಂದು ಖಾಸಗಿ ವೆಬ್‍ಸೈಟ್‍ವೊಂದು ವರದಿ ಮಾಡಿದೆ.