ನಾಸ್ತಿಕ ಕಮ್ಯೂನಿಸ್ಟ್ ರು ಅಸ್ತಿಕರಾಗಿ ಬದಲಾಗುತ್ತಿರುವುದೆ ಮೋದಿ ಆಡಳಿತ ಪ್ರಭಾವದಿಂದ -ರವೀಶ ತಂತ್ರಿ
0
ಏಪ್ರಿಲ್ 05, 2019
ಮಂಜೇಶ್ವರ: ಮೋದಿ ಆಡಳಿತದ ಪ್ರಭಾವದಿಂದ ನಾಸ್ತಿಕ ಎಡರಂಗ ಈಗ ಮತ ಬೇಟೆಗಾಗಿ ದೇವಾಲಯಗಳ ಮುಂದೆ ಕೈ ಮುಗಿದು ನಿಲ್ಲುತ್ತಿರುವುದೇ ಅಚ್ಛೇ ದಿನ್. ನಾಸ್ತಿಕ ಎಡ ಚಿಂತಕರು, ಬಿಜೆಪಿ ಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್‍ನೊ0ದಿಗೆ ವಿಲೀನ ವಾದದ್ದು ಅವರಿಗೆ ತಿಳಿದಿಲ್ಲ. ಎಡರಂಗದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ. ಕಾಂಗ್ರೆಸ್‍ನ ಪ್ರಧಾನಿ ಅಭ್ಯರ್ಥಿಯೂ ರಾಹುಲ್ ಗಾಂಧಿ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಸ್ಪರ್ಧೆ ಇರುವುವುದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮಧ್ಯೆ ಎಂದು ಲೋಕಸಭಾ ಚುನಾವಣೆಯ ಕಾಸರಗೋಡಿನ ಎನ್ ಡಿ ಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರು ಹೇಳಿದರು.
ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ಗುರುವಾರ ಜರಗಿದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವಾಗ ಇಲ್ಲಿಯ ಶಾಸಕರಾಗಿ ಬಿಜೆಪಿ ಅಭ್ಯರ್ಥಿಯನ್ನು ಜಯಗಳಿಸಬೇಕೆಂದು ಅವರು ಮತ ಯಾಚಿಸಿದರು.
ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಬಾಲಕೃಷ್ಣ ಶೆಟ್ಟಿ, ಆದರ್ಶ್ ಬಿಎಂ, ಮುರಳೀಧರ್ ಯಾದವ್ ಮೊದಲಾದವರು ಅಭ್ಯರ್ಥಿ ಯೊಂದಿಗೆ ಉಪಸ್ಥಿತರಿದ್ದರು. ಯಸ್ಪಲ್ ಸ್ವಾಗತಿಸಿ, ತಾರಾನಾಥ ವಂದಿಸಿದರು.