ಕಾಸರಗೋಡು: ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಕೇರಳ ಸರಕಾರ ಜಾರಿಗೊಳಿಸಿದ ವೇತನ ಪರಿಷ್ಕರಣೆಯನ್ನು ತಮ್ಮ ಸಂಸ್ಥೆಯಲ್ಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದ ಕಾಂಞಂಗಾಡು ಸಂಜೀವಿನಿ ಆಸ್ಪತ್ರೆಯ ಆರು ಮಂದಿ ನರ್ಸ್‍ಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿ ಸೇವೆಯಿಂದ ವಜಾಗೊಳಿಸಿದೆ. ಆಡಳಿತ ಮಂಡಳಿಯ ಈ ನಿರ್ಧಾರದಿಂದ ಈ ಆರು ಮಂದಿ ನರ್ಸ್‍ಗಳು ಈಗ ತೀವ್ರ ಆರ್ಥಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಈ ವಿಷಯದಲ್ಲಿ ಕೂಡಲೇ ಹಸ್ತಕ್ಷೇಪ ನಡೆಸಿ ವಜಾಗೊಳಿಸಿದ ನರ್ಸ್‍ಗಳನ್ನು ಮತ್ತೆ ಸೇವೆಗೆ ಸೇರ್ಪಡೆಗೊಳಿಸಬೇಕು ಮತ್ತು ಎಲ್ಲ ನರ್ಸ್‍ಗಳಿಗೆ ಕನಿಷ್ಠ ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಇಂಡ್ಯನ್ ನರ್ಸಸ್ ಅಸೋಸಿಯೇಶನ್ ನೇತೃತ್ವದಲ್ಲಿ ಎ.29ರಂದು ಬೆಳಗ್ಗೆ 10ರಿಂದ ಕಾಸರಗೋಡು ಜಿಲ್ಲಾ„ಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಮುಷ್ಕರ ನಡೆಯಲಿದೆ ಎಂದು ಅಸೋಸಿಯೇಶನ್‍ನ ರಾಜ್ಯಾಧ್ಯಕ್ಷ ಲಿಬಿನ್ ಥೋಮಸ್ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೆ.ಬಿ.ಜಿಷಾ, ಸಿಮಿ ಉಪಸ್ಥಿತರಿದ್ದರು.