ಕಾಸರಗೋಡು: ಕಾಸರಗೋಡು ಲೋಕಸಭೆ ಕ್ಷೇತ್ರದ ಇ.ವಿ.ಎಂ.ಟೆಂಡರ್ಡ್ ಬ್ಯಾಲೆಟ್‍ಗಳು, ಅಂಚೆ ಬ್ಯಾಲೆಟ್‍ಗಳು ಇತ್ಯಾದಿ ಜಿಲ್ಲಾಧಿಕಾರಿ ಕಚೇರಿಗೆ ತಲಪಿದ್ದು, ಬ್ಯಾಲೆಟ್ ಪೇಪರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಚುನಾವಣೆ ವಿಭಾಗ ಕಿರಿಯ ವರಿಷ್ಠಾಧಿಕಾರಿ ಗೋವಿಂದನ್ ರಾವಣೇಶ್ವರಂ ಮೊದಲಾದವರು ಉಪಸ್ಥಿತರಿದ್ದರು.
ಲೋಕಸಭೆ ಕ್ಷೇತ್ರದ ಎಲ್ಲ ಮತಕೇಂದ್ರಗಳಿಗೆ ಬೇಕಾದ ವಿದ್ಯುನ್ಮಾನ ಯಂತ್ರ ಬ್ಯಾಲೆಟ್ ಟೆಂಡರ್ಡ್ ಪೇಪರ್ ಗಳು, ಅಂಚೆ ಬ್ಯಾಲೆಟ್ ಪೇಪರ್‍ಗಳು ಇತ್ಯಾದಿ ಜಿಲ್ಲಾಧಿಕಾರಿಗೆ ರವಾನೆಗೊಂಡಿವೆ. ಸಹಾಯಕ ಜಿಲ್ಲಾಧಿಕಾರಿ (ಎಲ್.ಆರ್.)ಎಸ್.ಎಲ್.ಸಜಿ ಕುಮಾರ್ ಮತ್ತು ಕಾಸರಗೋಡು ಎಲ್.ಆರ್.ಸ್ಪೆಷಲ್ ತಹಸೀಲ್ದಾರ್ ಸೂರ್ಯನಾರಾಯಣ ಅವರ ನೇತೃತ್ವದಲ್ಲಿ ಬ್ಯಾಲೆಟ್ ಪೇಪರ್‍ಗಳು ಆಗಮಿಸಿವೆ. ಅಂಚೆ ಬ್ಯಾಲೆಟ್ ಪೇಪರ್‍ಗಳು ಕಣ್ಣೂರು ಸರಕಾರಿ ಸೆಂಟ್ರಲ್ ಮುದ್ರಣಾಲಯದಲ್ಲಿ ಅಚ್ಚಾಗಿವೆ. 33,380 ವಿದ್ಯುನ್ಮಾನ ಮತಯಂತ್ರಗಳ ಬ್ಯಾಲೆಟ್ ಪೇಪರ್‍ಗಳು, 10 ಸಾವಿರ ಅಂಚೆ ಬ್ಯಾಲೆಟ್ ಪೇಪರ್‍ಗಳು ಇಲ್ಲಿಗೆ ಆಗಮಿಸಿವೆ.
(ಸಮರಸ ಚಿತ್ರ ಮಾಹಿತಿ : ಬ್ಯಾಲೆಟ್ ಪೇಪರ್‍ಗಳನ್ನು ಈಕ್ಷಿಸುತ್ತಿರುವ ನಿರೀಕ್ಷಕ ಎಸ್.ಗಣೇಶ್ ಮತ್ತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು)