ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಅಣಂಗೂರು ಉಪಸಂಘದ ಆಶ್ರಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಬೇಸಿಗೆಯ ರಜಾಕಾಲ ಪ್ರಯುಕ್ತ ಎ.21 ರಿಂದ ಒಂದು ತಿಂಗಳ ಕಾಲ ಚಿತ್ರಕಲಾ ತರಬೇತಿ ಶಿಬಿರ ನಡೆಯಲಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಅಣಂಗೂರಿನ ಅರುಣ್ ಸಭಾಂಗಣದಲ್ಲಿ ಚಿತ್ರ ಕಲಾ ತರಬೇತಿ ಶಿಬಿರ ಆರಂಭಗೊಳ್ಳಲಿದೆ. ಅಣಂಗೂರು ಉಪಸಂಘದ ಅಧ್ಯಕ್ಷ ಕಮಲಾಕ್ಷ ಅಣಂಗೂರು ಅಧ್ಯಕ್ಷತೆ ವಹಿಸುವರು. ಕಲಾವಿದ ಪ್ರದೀಪ್ ಶಿಬಿರವನ್ನು ಉದ್ಘಾಟಿಸುವರು. ಜಿಲ್ಲಾ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ, ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಆಶಾ ರಾಧಾಕೃಷ್ಣ, ಜಿಲ್ಲಾ ಯುವ ಸಂಘದ ಅಧ್ಯಕ್ಷ ಭರತೇಶ್ ಉಪಸ್ಥಿತರಿರುವರು.