ಮಧೂರು : ಮಿತ್ರರಂಗ ಮಂಟಪ ಸಮರ್ಪಣೆ
0
ಏಪ್ರಿಲ್ 03, 2019
ಮಧೂರು: ಅರಿವಿನ ಬೆಳಕನ್ನು ನೀಡಿ ಸಾವಿರಾರು ಮಂದಿಯ ಬಾಳನ್ನು ಬೆಳಗಿಸಿದ ಮಧೂರು ಕಿರಿಯ ಬುನಾದಿ ಶಾಲೆಗೆ ಮಿತ್ರಕಲಾವೃಂದವು ನಿರ್ಮಿಸಿ ಉಚಿತವಾಗಿ ನೀಡಿದ `ಮಿತ್ರರಂಗ ಮಂಟಪವನ್ನು ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಅವರು ಭಾನುವಾರ ನಡೆದ ಸಂಘದ 43 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಮರ್ಪಿಸಿದರು.
ಸಂಘದ ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿ, ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಿತ್ರ ಕಲಾವೃಂದದ ಸಾಧನೆಗಳನ್ನು ಅವರು ಶ್ಲಾಘಿಸಿದರು.
ಇಂಡ್ಯನ್ ನೇವಿಯ ನಿವೃತ್ತ ಅಧಿಕಾರಿ ಹರೀಶ್ ಕಡಮಣ್ಣಾಯ, ಮಧೂರು ಶಾಲಾ ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಬಿ. ಶುಭಹಾರೈಸಿದರು. ವಿದ್ಯಾಧಿಕಾರಿ ನಂದಿಕೇಶನ್ ಪ್ರತಿಭಾ ಪುರಸ್ಕಾರ ನೀಡಿದರು. ಮನಶಾಸ್ತ್ರಜ್ಞ ಹಾಗು ಬಹುಮುಖೀ ಸಾಧಕ ನವೀನ್ ಎಲ್ಲಂಗಳ ಬಹುಮಾನ ವಿತರಿಸಿದರು.
ಶ್ರಾವ್ಯ, ಸಿಂಧೂರ ಪ್ರಾರ್ಥನೆ ಹಾಡಿದರು. ಮಿತ್ರಕಲಾವೃಂದದ ಅಧ್ಯಕ್ಷ ಚಂದ್ರಗೋಪಾಲ ಎನ್. ಸ್ವಾಗತಿಸಿ, ಸ್ಥಾಪಕ ಸದಸ್ಯ ಚಂದ್ರಹಾಸ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಮಹೇಶ್ ವರದಿ ವಾಚಿಸಿದರು. ಕೋಶಾಧಿಕಾರಿ ಮಧುಕರ ಕೆ.ಗಟ್ಟಿ ವಂದಿಸಿದರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸುಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನೃತ್ಯ ವೈವಿಧ್ಯ, `ಬಯ್ಯ ಮಲ್ಲಿಗೆ' ತುಳು ನಾಟಕ ಜರಗಿತು.