ಕಾಸರಗೋಡು: ದಿ.ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಟ್ರಸ್ಟ್ ಕಾಸರಗೋಡು ಕೊಡಮಾಡುವ 2019-2020 ನೇ ಶೈಕ್ಷಣಿಕ ವರ್ಷದಲ್ಲಿ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆರ್ಥಿಕ ಸಹಾಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಆರ್ಥಿಕ ಸಂಕಷ್ಟವು ಕಾರಣವಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸದ್ರಿ ಪ್ರತಿಷ್ಠಾನವು ಸಹಾಯ ಹಸ್ತವನ್ನು ಚಾಚಲು ಸಿದ್ಧವಾಗಿದೆ.
2018-19 ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ, ಪ್ಲಸ್ ವನ್, ಪ್ಲಸ್ ಟು ಅಥವಾ ಅಂತಿಮ ಪದವಿ ತರಗತಿಗಳಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಗಳಿಸಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಾಯವಾಗುವಂತೆ ಈ ಯೋಜನೆಯನ್ನು ರೂಪೀಕರಿಸಲಾಗಿದೆ. ಕನ್ನಡ, ಹಿಂದಿ ಮತ್ತು ಮಲಯಾಳ ಮಾಧ್ಯಮದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದಾರೆ. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನವು ಎಲ್ಲಾ ಮೂಲಗಳಿಂದ ರೂಪಾಯಿ ಒಂದು ಲಕ್ಷ ಮೀರಿರಬಾರದು. ಪ್ರಪ್ರಥಮವಾಗಿ ಅರ್ಜಿ ಸಲ್ಲಿಸುವವರು, ಅರ್ಜಿ ಫಾರಂಗಳು ಮತ್ತು ಹೆಚ್ಚಿನ ವಿವರಗಳನ್ನು ಫೆÇೀರ್ ಪ್ರಿಂಟ್, ಸಿಟಿ ಸೆಂಟರ್, ಕರ್ನಾಟಕ ಬ್ಯಾಂಕಿನ ಹತ್ತಿರ, ಬ್ಯಾಂಕ್‍ರಸ್ತೆ, ಕಾಸರಗೋಡು -671121 ಇವರಿಂದ ಎಪ್ರಿಲ್ 21 ರಿಂದ ಉಚಿತವಾಗಿ ಪಡೆಯಬಹುದು.
ನವೀಕರಣ ಅರ್ಜಿ ಸಲ್ಲಿಸಲಿರುವವರು (2018-19 ನೆಯ ವರ್ಷದ ಫಲಾನುಭವಿಗಳು) ನವೀಕರಣ ಅರ್ಜಿ ಫಾರಂಗಳನ್ನು ಮೇ ತಿಂಗಳಿನ ಒಂದನೇ ತಾರೀಕಿನಿಂದ ಪಡೆಯಬಹುದು. ಅಂಚೆ ಮೂಲಕ ಅರ್ಜಿ ಫಾರಂ ಕಳುಹಿಸಲಾಗುವುದಿಲ್ಲ.
ಪ್ರಪ್ರಥಮವಾಗಿ ಅರ್ಜಿ ಸಲ್ಲಿಸುವ ಹೊಸ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಎ.28 ರ ಮತ್ತು
ನವೀಕರಣ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇ 10 ರ ಒಳಗೆ ಫೆÇೀರ್ ಪ್ರಿಂಟ್ ಇವರಿಗೆ ತಲುಪಿಸಬೇಕು.
ದಿ.ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಟ್ರಸ್ಟ್ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಈ ಆರ್ಥಿಕ ಯೋಜನೆಯನ್ನು ಹಮ್ಮಿಕೊಂಡಿದೆ. ಪ್ರತಿ ವರ್ಷ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸ ಪೂರ್ತಿಯಾಗುವ ತನಕ ಧನಸಹಾಯವನ್ನು ನೀಡಲಾಗುವುದು.
ಸಂಸ್ಥೆಯ ಕಾರ್ಯಕರ್ತರು ವಿದ್ಯಾರ್ಥಿಗಳ ವಾಸಸ್ಥಳ ಮತ್ತು ಶಾಲೆ, ಹೆತ್ತವರ ಉದ್ಯೋಗ ಸ್ಥಳಕ್ಕೆ ಭೇಟಿ ಕೊಟ್ಟು, ಅರ್ಜಿಯಲ್ಲಿ ನೀಡಿದ ವಿವರಗಳನ್ನು ತಪಾಸಣೆ ಮಾಡುತ್ತಾರೆ. ಅರ್ಜಿಯಲ್ಲಿ ನೀಡಿದ ವಿವರಗಳು ಅಪೂರ್ಣವಾದಲ್ಲಿ ಮತ್ತು ಅಸತ್ಯವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಈ ಫಲಾನುಭವಿಗಳ ಪೆÇೀಷಕತ್ವ ಮತು ಆಯ್ಕೆ ನಮ್ಮೊಂದಿಗೆ ಸಹಕಾರ ನೀಡುವ ಇತರ ಸಂಸ್ಥೆಗಳ ತೀರ್ಮಾನಗಳಿಗೆ ಒಳಗಾಗಿರುತ್ತದೆ. ಯಾವುದೇ ವ್ಯಕ್ತಿ ಯಾ ಸಂಸ್ಥೆಗಳಿಂದ ಪ್ರಭಾವ ಬೀರುವ ಪ್ರಯತ್ನವನ್ನು ಮಾಡಿದಲ್ಲಿ ಅಂತಹ ವಿದ್ಯಾರ್ಥಿಗಳು ಆಯ್ಕೆಗೆ ಅನರ್ಹರಾಗಿರುತ್ತಾರೆ ಎಂದು ದಿ.ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ವಿ.ಕಕ್ಕಿಲ್ಲಾಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.