ಕಾಸರಗೋಡು: ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ನಾಮಪತ್ರಿಕೆ ಹಿಂತೆಗೆಯುವ ದಿನಾಂಕ ಸೋಮವಾರವಾಗಿದ್ದು, ಯಾವ ಅಭ್ಯರ್ಥಿಯೂ ನಾಮಪತ್ರಿಕೆ ಹಿಂತೆಗೆದುಕೊಂಡಿಲ್ಲ. ಈ ಮೂಲಕ ಲೋಕಸಭಾ ಕ್ಷೇತ್ರದಲ್ಲಿ 9 ಮಂದಿ ಅಭ್ಯರ್ಥಿಗಳು ರಂಗದಲ್ಲಿದ್ದಾರೆ. ಇವರಲ್ಲಿ 5 ಮಂದಿ ಸ್ವತಂತ್ರ ಅಭ್ಯರ್ಥಿಗಳು.
ಅಭ್ಯರ್ಥಿಗಳ ಅಂತಿಮ ಪಟ್ಟಿ :
..........................................
1. ನ್ಯಾಯವಾದಿ ಬಶೀರ್ ಆಲಡಿ(ಬಿ.ಎಸ್.ಪಿ.)
2. ಕುಂಟಾರು ರವೀಶ ತಂತ್ರಿ(ಬಿ.ಜೆ.ಪಿ.)
3. ಕೆ.ಪಿ.ಸತೀಶ್ಚಂದ್ರನ್(ಸಿ.ಪಿ.ಎಂ.)
4. ಗೋವಿಂದನ್ ಬಿ.ಆಲಿನ್ ತಾಳೆ(ಸ್ವತಂತ್ರ)
5. ಸುರೇಂದ್ರ ಕುಮಾರ್ ಕೆ.(ಸ್ವತಂತ್ರ)
6. ರಣದೀವನ್ ಆರ್.ಕೆ.(ಸ್ವತಂತ್ರ)
7. ರಮೇಶನ್ ಬಂದಡ್ಕ(ಸ್ವತಂತ್ರ)
8. ಸಜಿ(ಸ್ವತಂತ್ರ)
ಅಭ್ಯರ್ಥಿಗಳಿಗೆ ಚಿಹ್ನೆ ಮಂಜೂರು
ಕಾಸರಗೋಡು ಲೋಕಸಭೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಚಿಹ್ನೆ ಮಂಜೂರು ಮಾಡಲಾಗಿದೆ. ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವತಂತ್ರ ಅಭ್ಯರ್ಥಿಗಳಿಗೆ ಚಿಹ್ನೆ ಮಂಜೂರು ಮಾಡಿದ್ದಾರೆ.
ಅಭ್ಯರ್ಥಿಗಳಿಗೆ ಮಂಜೂರುಗೊಂಡಿರುವ ಚಿಹ್ನೆ
.............................................................
1. ನ್ಯಾಯವಾದಿ ಬಶೀರ್ ಆಲಡಿ(ಬಿ.ಎಸ್.ಪಿ.)-ಚಿಹ್ನೆ-ಆನೆ.
2. ಕುಂಟಾರು ರವೀಶ ತಂತ್ರಿ(ಬಿ.ಜೆ.ಪಿ.)-ಚಿಹ್ನೆ-ತಾವರೆ.
3. ಕೆ.ಪಿ.ಸತೀಶ್ಚಂದ್ರನ್(ಸಿ.ಪಿ.ಎಂ.)-ಕತ್ತಿ ಸುತ್ತಿಗೆ ನಕ್ಷತ್ರ.
4. ಗೋವಿಂದನ್ ಬಿ.ಆಲಿನ್ ತಾಳೆ(ಸ್ವತಂತ್ರ)-ಕೋಟು.
5. ಸುರೇಂದ್ರ ಕುಮಾರ್ ಕೆ.(ಸ್ವತಂತ್ರ)-ಆಟೋರಿಕ್ಷಾ.
6. ರಣದೀವನ್ ಆರ್.ಕೆ.(ಸ್ವತಂತ್ರ)-ಫುಟ್ ಬಾಲ್.
7. ರಮೇಶನ್ ಬಂದಡ್ಕ(ಸ್ವತಂತ್ರ)-ಕೊಡ.
8. ಸಜಿ(ಸ್ವತಂತ್ರ)-ಹೆಲಿಕಾಪ್ಟರ್.