HEALTH TIPS

ರಾಜಕೀಯಕ್ಕೆ ಸೇರಿದರೆ ನನ್ನ ಪತ್ನಿ ನನ್ನನ್ನು ಬಿಟ್ಟು ಹೋಗುತ್ತಾಳೆ: ರಘುರಾಮ್ ರಾಜನ್

         
   ನವದೆಹಲಿ: ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲು ಆಸಕ್ತಿ ಹೊಂದಿಲ್ಲ, ಸುಖವಾಗಿ ಸಾಗುತ್ತಿರುವ ಸಂಸಾರ ಜೀವನವನ್ನು ರಾಜಕೀಯಕ್ಕೆ ಸೇರಿ ಹಾಳು ಮಾಡಿಕೊಳ್ಳಲು ನನಗೆ ಇಚ್ಚೆ ಇಲ್ಲ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
     ಖ್ಯಾತ ಹಣಕಾಸು ಪಂಡಿತ, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಾಜಿ ಮುಖ್ಯ ಅರ್ಥಶಾಸ್ತ್ರ ಜ್ಞ ರಾಜನ್ ಭವಿಷ್ಯದ ಕೇಂದ್ರ ಸರ್ಕಾರದ ಮುಂದಿರುವ ಸವಾಲುಗಳ ಕುರಿತು "ದಿ ಮಿಂಟ್" ಜತೆ ಮಾತನಾಡಿದ್ದಾರೆ.
    ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ "ನ್ಯಾಯ್" ಯೋಜನೆ ಹಾಗೂ ಮೋದಿ ಸರ್ಕಾರದ ಸಾಧನೆ ಕುರಿತು ಮಾಜಿ ಆರ್ಬಿಐ ಗವರ್ನರ್ ಮಾತನಾಡಿದ್ದಾರೆ. ಸಧ್ಯ ರಾಜನ್ ಚೆನ್ನೈನಲ್ಲಿದ್ದು ಅಲ್ಲಿನ ಕ್ರಿಯಾ ಯುನಿವರ್ಸಿಟಿ  ಮಂಡಳಿಯ ಸಭೆಯಲ್ಲಿ ಬಾಗವಹಿಸಿದ್ದಾರೆ.
   "ಮೊದಲನೆಯದಾಗಿ, ನಾನು ರಾಜಕೀಯ ಸೇರಿದರೆ ನನ್ನ ಪತ್ನಿ ನನ್ನೊಡನೆ ಇರುವುದಿಲ್ಲ ಎಂದು ಹೇಳಿದ್ದಾರೆ. ಈಗಿನ ರಾಜಕೀಯದಲ್ಲಿ ಗದ್ದಲವೇ ತುಂಬಿದೆ, ಇದರ ಕುರಿತು ನನಗೆ ಆಸಕ್ತಿ ಇಲ್ಲ. ಇಲ್ಲಿ ಯಾರೊಬ್ಬರೂ ಭಾಷಣಗಳನ್ನು ಮಾಡಿ ಮತಗಲನ್ನು ಪಡೆಯಬಹುದು" ರಾಜನ್ ಹೇಳಿದ್ದಾರೆ.
   "ನನ್ನ ಬರವಣಿಗೆಯಲ್ಲಿ ಕೆಲವು ಪಕ್ಷಗಳಿಗೆ ಅನುಕೂಲವಾಗುವ ಅಂಶಗಳಿದೆ ಎನ್ನಲಾಗುತ್ತಿದೆ, ನಿಮಗೆ ನನ್ನ ನಿಲುವಿನ ಕುರಿತು ಗೊತ್ತಿದೆ. ಸತ್ಯವೆಂದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ.ಇಲ್ಲವೆಂದರೆ ಏನೇನೂ ಇಲ್ಲವೆಂದೇ ಅರ್ಥ. ನಾನು ಈಗ ಎಲ್ಲಿರುವೆನೋ ಅಲ್ಲಿಯೇ ಸಮ್ತೋಷವಾಗಿದ್ದೇನೆ" ಒಂದು ವೇಳೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೇರಿದರೆ ರಾಜನ್ ಸಚಿವರಾಗಲಿದ್ದಾರೆ ಎಂಬ ಊಹೆಯನ್ನು ಅವರು ತಳ್ಳಿ ಹಾಕಿದ್ದಾರೆ.
   "ನಾನಿನ್ನೂ ಸಾಗಬೇಕಾದ ದಾರಿ ಬಹಳ ದೂರವಿದೆ. ದುರದೃಷ್ಟವಶಾತ್, ನಾನು ಇಲ್ಲಿ ಮಾಡಿದ ರೀತಿಯ ಕೆಲಸ ಎಲ್ಲರಿಗೆ ಅರ್ಥೈಸಿಕೊಳ್ಲಲು ಸಾಧ್ಯವಾಗಿಲ್ಲ, ನನ್ನ ಪ್ರಾಥಮಿಕ  ನಡೆಯು ಸಾರ್ವಜನಿಕ ಕಣದಲ್ಲಿದೆ ಇದು ಶಿಕ್ಷಣ ಕ್ಷೇತ್ರದಲ್ಲಿದೆ, ನನಗೆ ಈ ಕೆಲಸ ಇಷ್ಟವಾಗಿದೆ.ನಾನು ಈ ಕ್ಷೇತ್ರದಲ್ಲಿ ಸಮಂಜಸವಾಗಿ ತೊಡಗಿಕೊಂಡಿದ್ದೇನೆ. ನಾನು ಇತ್ತೀಚೆಗೆ ಒಂದು ಪುಸ್ತಕವನ್ನು ಬರೆದಿದ್ದೇನೆ ("ದಿ ಥರ್ಡ್ ಪಿಲ್ಲರ್") ಇದು ಪುರಾಣಕ್ಕಿಂತ ಹೆಚ್ಚು ಬೌದ್ದಿಕವಾಗಿದೆ.ಅಲ್ಲಿ ನಾನು ಎಲ್ಲವನ್ನೂ ಹೇಳಿದ್ದೇನೆ." ಅವರು ಹೇಳಿದ್ದಾರೆ.
"ಕೆಲವು ಸಹಾಯಕ ಮಾರ್ಗಗಳಲ್ಲಿ ನಡೆಯಲು ನನಗೆ ಸಂತೋಷವಿದೆ,  ಕೆಲವೊಮ್ಮೆ ಜನರು ಸಲಹೆಯನ್ನು ಬಯಸುತ್ತಾರೆ, ಮತ್ತು ಆ ಸಲಹೆಯನ್ನು ನೀಡಲು ನನಗೆ ಸಂತಸವಾಗುತ್ತದೆ.
    "ನಾವು ನಿರೀಕ್ಷಿಸಿದ್ದಕ್ಕಿಂತ ಭಿನ್ನವಾಗಿ  ಏನನ್ನೂ ಮುಂದೂಡಲು ಸಾಧ್ಯವಿಲ್ಲ" ರಾಜನ್ ಬಿಜೆಪಿ ಸರ್ಕಾರದ ಬಗೆಗೆ ಹೇಳಿದ್ದಾರೆ.
     "ಆರ್ಥಿಕವಾಗಿ ಮುಂದುವರಿಯುವುದು ಉತ್ತಮವೇನೋ ಸರಿ,  7% ನಷ್ಟು ಅಭಿವೃದ್ದಿ ಎಂಬುದೂ ಸರಿ, ಆದರೆ ಈ ಅಭಿವೃದ್ದಿ ಉದ್ಯೋಗ ಸೃಷ್ಟಿಯಾದದ್ದರಿಂದಲೋ ಅಥವಾ ಉದ್ಯೋಗವಿಲ್ಲದೆಯೇ ನಡೆದಿದೆಯೆ?ಅದು ಇನ್ನೊಂದು ವಿಷಯ. ಆರ್ಥಿಕ ಬೆಳವಣಿಗೆಯು ಕೆಲವು ಆತಂಕವನ್ನು ಒಳಗೊಂಡಿದೆ.ನಾವು ಪ್ರಪಂಚದ ಆರ್ಥಿಕ ಚೌಕಟ್ಟನ್ನು ಬದಲಿಸಲು ಸಾಧ್ಯವೆ? ಇದನ್ನು ನಾನು ಒಪ್ಪಲಾರೆ. ಮತ್ತು ಇದಕ್ಕೆ ದೀರ್ಘಕಾಲದ ಸಮಯದ ಅಗತ್ಯವಿದೆ. ಅದಾಗ್ಯೂ ಸರ್ಕಾರದ ಯಶಸ್ಸನ್ನು ಎಚ್ಚರಿಕೆಯಿಂಡ ಮಾಪನ ಮಾಡಬೇಕು" ರಾಜನ್ ಹೇಳಿದ್ದಾರೆ.
   "ಆಡಳಿತದಲ್ಲಿ ನಿರಂತರತೆಯಿದೆ. ಯುಪಿಎ ಏನು ಮಾಡಿದೆ ಎಂದು ಎನ್ಡಿಎ ಕಾಣುತ್ತದೆ - ಜಿಎಸ್ಟಿ, ನೇರ ಲಾಭ ವರ್ಗಾವಣೆ, ಆಧಾರ್ ಮುಂತಾದ ವಿಷಯಗಳಿಗೆ ಈ ಸರ್ಕಾರ ಒತ್ತು ನೀಡಿದೆ. ಮಾಡಲಾದ ಎಲ್ಲಾ ಸುಧಾರಣೆಗಳನ್ನು ನೀವು ಗಮನಿಸಿದಾಗ ಅದರಲ್ಲಿ ನಿರಂತರತೆ ಕಾಣುತ್ತದೆ. ಪ್ರಶ್ನೆ ಏನೆಂದರೆ ಇದು ಒಳ್ಳೆಯದೆ? ಇದರಿಂದ ನಾವು ಸರಾಸರಿ ಅನುಕೂಲ ಪಡೆಯಲು ಸಾಧ್ಯವೆ? 
   "ಅದೇ ಸರ್ಕಾರವು ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೋ ಅಥವಾ ಹೊಸ ಸರ್ಕಾರ ಬರುತ್ತದೆಯೋ ಆದರೆ ಸವಾಲುಗಳು ಮಾತ್ರ ಒಂದೇ ಆಗಿರಲಿದೆ. ಆರ್ಥಿಕ ಸುಧಾರಣೆಗಳನ್ನು ನಿಭಾಯಿಸುವ ಕಾರ್ಯವಿಧಾನಗಳು, ಮತ್ತು ಉದ್ಯೋಗ ಸೃಷ್ಟಿ ಇದು ಯಾವ ಸರ್ಕಾರಕ್ಕೂ ಒಂದೇ ಏಟಿಗೆ ಸಾಧ್ಯವಾಗುವ ಕಾರ್ಯವಲ್ಲ" ಮಾಜಿ ಆರ್ಬಿಐ ಗವರ್ನರ್ ಹೇಳುತ್ತಾರೆ.
   "ಇಲ್ಲಿ ಸಮಸ್ಯೆ ಉದ್ಯೋಗವಿಲ್ಲ ಎಂದಲ್ಲ, ಒಳ್ಳೆಯ ಉದ್ಯೋಗಗಳಿಲ್ಲ. ಮುಂದಿನ ಹಂತದ ಬೆಳವಣಿಗೆಗೆ ನಮ್ಮನ್ನು ಸಕ್ರಿಯಗೊಳಿಸಲು ನಮಗೆ ಆರ್ಥಿಕ ಸಲಕರಣೆಗಳಿದೆಯೆ?  ಉದ್ಯಮಗಳು ಬಲವಾಗುವಂತಾಗಲು  ಸಹಾಯವಾಗುವಂತಹ ಸಂಶೋಧನಾ ತಂಡಗಳನ್ನು ನಾವು ವಿಶ್ವವಿದ್ಯಾನಿಲಯಗಳಲ್ಲಿ ಹೊಂದಿದ್ದೇವೆಯೆ?ಇದನ್ನು ನಾನು ಈ ದೇಶದಲ್ಲಿ ಕಾಣಲಿಲ್ಲ.":
   "ನಾವು ಆ ಸಂಶೋಧನೆಗಳ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆಯೆಎಂಬುದು ಸ್ಪಷ್ಟವಾಗಿಲ್ಲ. ಉದಾಹರಣೆಗೆ ವಿದ್ಯುತ್ ಬ್ಯಾಟರಿಗಳು, ಚೀನಾದೈಂಡ ಆಮದಾಗುತ್ತಿದೆ, ಇವನ್ನು ನಾವು ಉತ್ಪಾದಿಸಬಹುದುಎ?ಇಲ್ಲಿಗೆ ಹೋಲಿಸಿದಾಗ ಹೂಡಿಕೆದಾರರು ವಿಯೆಟ್ನಾಂ ಹಾಗೂ ಬಾಂಗ್ಲಾದೇಶಗಳತ್ತ ಹೆಚ್ಚು ಬರುತ್ತಿದ್ದಾರೆ. ಹೀಗಾಗಿ ಹೊಸ ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಮೊದಲ ಆದ್ಯತೆಯಾಗಿರಲಾರದು.
   ದೇಶವು ಉತ್ಪಾದಕತೆಯನ್ನು ಸುಧಾರಿಸಲು  ಮಾರುಕಟ್ಟೆಯ ಸುತ್ತಲಿನ ಸುಧಾರಣೆ ಅಗತ್ಯವಿದೆ.ಕಾಂಗ್ರೆಸ್ ನ "ನ್ಯಾಯ್" ಯೋಜನೆ ಕುರಿತು ಅವರು ಹೇಳಿದ್ದಾರೆ. "ಎನ್ಡಿಎ ಮತ್ತು ಯುಪಿಎ ಇಬ್ಬರೂ ಒಪ್ಪಿಗೆ ನೀಡಿದ ನೇರ ವರಮಾನ ವರ್ಗಾವಣೆಯ ಬಗ್ಗೆ ವಿಸ್ಕೃತವಾಗಿರುವ ಅಂಶವೆಂದರೆ ಇದು ಜನರಿಗೆ ಶಕ್ತಿ ತುಂಬುವುದು,  ಎಂದರೆ . ಜನರು ಖರೀದಿಸಲು ಸಾಧ್ಯವಾಗುವಂತೆ  ಸರ್ಕಾರ ಎಲ್ಲೆಡೆ  ಔಷಧಾಲಯವನ್ನು ತೆರೆಯುವುದು ಎಂದು ಅರ್ಥವಲ್ಲ. ಒಮ್ಮೆ ಜನರು ಆರ್ಥಿಕವಾಗಿ ಸದೃಢರಾದರೆ ಜನರು ಖಾಸಗಿ ಔಷಧಾಲಯವನ್ನು ಸ್ಥಾಪಿಸಬಹುದು. ಮತ್ತು ಈಗ ಜನರು ಖರೀದಿಸಲು ಔಷದಿ ಖರೀದಿಗಾಗಿ ಅದನ್ನೇ ಅವಲಂಬಿಸುತ್ತಾರೆ.ಇದು ವಿಕಸನದ ಅರ್ಥ, ನಾವಿಂದು ಏನು ಮಾಡುತಿದ್ದೇವೆ ಎಂದು ಮುಖ್ಯವಾಗುವುದಿಲ್ಲ.
   "ನೇರ ಆದಾಯ ವರ್ಗಾವಣೆ ಯೋಜನೆಗಳು ಕೆಲವು ಜನರಿಗೆ ನೇರವಾಗಿ ಆರ್ಥಿಕ ಚೈತನ್ಯ ನೀಡುವ ಯೋಜನೆಗಳಾಗಿದೆ. ನೀವು ಕಳೆದ ಹಲವು ದಶಕಗಳಿಂಡ  ಬಡತನ ನಿವಾರಣೆ ಯೋಜನೆ ಜಾರಿಗೆ ತಂದಿದ್ದೀರಿ, ಅದು ಬಹಳ ಸೀಮಿತ ಪಲಿತಾಂಶವನ್ನು ಣೀಡಿದೆ.ಆದ್ದರಿಂದ ನಾವು ಎಚ್ಚರಿಕೆಯಿಂದ ಪ್ರಯೋಗ ಮಾಡಬೇಕು "ಎಂದು ಅವರು ಹೇಳಿದರು.
"ಇದು ಕುಟುಂಬದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ, ಅದರಲ್ಲೂ ವಿಶೇಷವಾಗಿ ಮೇಲ್ಮಧ್ಯಮ, ಮಧ್ಯಮ ಉದ್ಯೋಗಗಳಿಗೆ ಇದರಿಂಡ ತೀರಾ ಪರಿಣಾಮವಾಗಲಿದೆ.. ಜನರು ಬಹಳ ಕೋಪಗೊಂಡಿದ್ದಾರೆ. ಏಕೆಂದರೆ ಅವರಿಗೆ ಇದುವರೆಗೆ ಇದ್ದ ಸಾಮಾಜಿಕ ಭದ್ರತೆ ನಶಿಸುವ ಭಯ ಉಂತಾಗಿದೆ."ರಾಜನ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries