ಬದಿಯಡ್ಕ: ಕಲ್ಲುಗದ್ದೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವು ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ನಾಗಬ್ರಹ್ಮ ವನದಲ್ಲಿ ಗಣಪತಿ ಹವನ, ಪ್ರಾರ್ಥನೆ, ಕಲಶಪೂಜೆ, ಕಲಶಾಭಿಷೇಕ, ಶ್ರೀ ನಾಗದೇವರಿಗೆ ತಂಬಿಲ ಸೇವೆ, ರಕ್ತೇಶ್ವರಿ, ಗುಳಿಗ, ಬ್ರಹ್ಮರಕ್ಷಸ್ಸು, ರಾಜ ಗುಳಿಗ ದೈವಗಳಿಗೆ ತಂಬಿಲ ಸೇವೆ, ಮಂಗಳಾರತಿ, ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಕೊರಗ ಗುಳಿಗ ಹಾಗು ರಾಜ ಗುಳಿಗ ದೈವಗಳ ಕೋಲ, ಅನ್ನಸಂತರ್ಪಣೆ ಜರಗಿತು.
ಉಷ:ಪೂಜೆ, ಕಲಶ ಪ್ರತಿಷ್ಠೆ, ಕಲಶಪೂಜೆ, ಕಲಶಾಭಿಷೇಕ, ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ, ದೀಪಾರಾಧನೆ, ಭಕ್ತ ವೃಂದ ಎಡನೀರು ಅವರಿಂದ ಭಕ್ತಿ ನಾಮಾರ್ಚನೆ, ಸರ್ವಾಲಂಕಾರ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ. ಪ್ರಸಾದ ವಿತರಣೆ, ಅನ್ನದಾನ ಜರಗಿತು.
ಶ್ರೀ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಪೂಜಾ ವಿಧಿಗಳು, ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಿತು.