HEALTH TIPS

ಪ್ರಕೃತಿ ಸೌಹಾರ್ಧ ಚುನಾವಣೆ:- ಸಂಹಿತೆ ಕಾಯ್ದುಕೊಳ್ಳುವಲ್ಲಿ ಆಂಟಿ ಡಿಫೇಸ್ ಮೆಂಟ್ ಸ್ಕ್ವಾಡ್ ಗಳ ಚಟುವಟಿಕೆ ಸಕ್ರಿಯ

     
   ಕಾಸರಗೋಡು: ಜಿಲ್ಲೆಯಲ್ಲಿ ಲೊಕಸಭೆ ಚುನಾವಣೆ ಸಂಬಂಧ ರಚಿಸಿರುವ ಆಂಟಿ ಡಿಫೇಸ್ ಮೆಂಟ್ ಸ್ಕ್ವಾಡ್ ಗಳ ಚಟುವಟಿಕೆ ಸಕ್ರಿಯವಾಗಿ ನಡೆಯುತ್ತಿದೆ. 
     ಚುನಾವಣೆ ಆಯೋಗ ಸಾರ್ವಜನಿಕರಿಗೆ ಒದಗಿಸಿರುವ ಸಿ-ವಿಜಿಲ್ ಆಪ್ ಮೂಲಕ ಲಭಿಸುವ ಎಲ್ಲ ದೂರುಗಳಿಗೆ 100 ನಿಮಿಷಗಳ ಅವಧಿಯಲ್ಲಿ ಇವರು ಪರಿಹಾರ ಒದಗಿಸುತ್ತಾರೆ. ಅರ್ಧರಾತ್ರಿಗೆ ಜನ ಕರೆಮಾಡಿದರೂ ತಕ್ಷಣ ಪರಿಹಾರಕ್ಕೆ ದಾವಿಸುವುದು ಸ್ಕ್ವಾಡ್ ನ ಕ್ರಮವಾಗಿದೆ.
      ಸಾರ್ವಜನಿಕ ಪ್ರದೇಶಗಳಲ್ಲಿ, ಖಾಸಗಿ ವ್ಯಕ್ತಿಯ ಅನುಮತಿ ಇಲ್ಲದೆ ರಾಜಕೀಯ ಲಾಂಛನಗಳು, ಭಿತ್ತಿಪತ್ರ, ಬ್ಯಾನರ್ ಇತ್ಯಾದಿ ಸ್ಥಾಪಿಸಿದ್ದರೆ ಅದನ್ನು ತೆರವುಗೊಳಿಸಲು ರಚಿಸಿರುವ ದಳವೇ ಆಂಟಿ ಡಿಫೇಸ್ ಮೆಂಟ್ ಸ್ಕ್ವಾಡ್. ಚುನಾವಣೆ ಅಧಿಸೂಚನೆ ಪ್ರಕಟಗೊಂಡ ನಂತರ ಈ ದಳ ಚಟುವಟಿಕೆ ಆರಂಭಿಸಿದೆ.
     ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳನ್ನುಪ್ರಧಾನವಾಗಿಸಿ ರಚಿಸಿರುವ 5 ದಳಗಳು, ಒಂದು ಜಿಲ್ಲಾ ಮಟ್ಟದ ದಳ ಸಹಿತ 6 ಸ್ಕ್ವಾಡ್ ಗಳು ಈ ನಿಟ್ಟಿನಲ್ಲಿ ಚಟುವಿಟಿಕೆ ನಡೆಸುತ್ತಿವೆ. 5 ಮಂದಿ ಸದಸ್ಯರು ಪ್ರಧಾನವಾಗಿ ಒಂದು ತಂಡದಲ್ಲಿದ್ದಾರೆ. ನ್ಯಾಯಮೂರ್ತಿ, ಎ.ಎಸ್.ಐ., ಕಾನ್ ಸ್ಟೇಬಲ್, ಸಹಾಯಕ, ವೀಡಿಯೋಗ್ರಾಫರ್, ಚಾಲಕ ಒಂದು ತಂಡದಲ್ಲಿ ಕರ್ತವ್ಯದಲ್ಲಿದ್ದಾರೆ.
    ಸಿ-ವಿಜಿಲ್ ಮೂಲಕ ಲಭಿಸುವ ದೂರುಗಳನ್ನು ಇವರು ಪ್ರಧಾನವಾಗಿ ಪರಿಹರಿಸುತ್ತಾರೆ. ಸಿ-ವಿಜಿಲ್ ಮೂಲಕ ದೂರು ಲಭಿಸಿದೇ ಇದ್ದರೂ, ಎಲ್ಲಿ ಸಂಹಿತೆ ಉಲ್ಲಂಘನೆ ಕಂಡರೂ ಸ್ವಯಂಪ್ರೇರಣೆಯಿಂದ ತಂಡ ಕ್ರಮ ಕೈಗೊಳ್ಳಲುತ್ತದೆ.
    ಲೋಕಸಭೆ ಚುನಾವಣೆಯನ್ನು ಪ್ರಕೃತಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಹಸುರು ಸಂಹಿತೆ ಕಡ್ಡಾಯವಾಗಿ ಪಾಲಿಸುವಲ್ಲಿ ಈ ದಳ ಸಕ್ರಿಯವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries