ಕಾಸರಗೋಡು: ಬೇಸಿಗೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಬರಗಾಲ ಪ್ರತಿರೋಧ ಚಟುವಟಿಕೆಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ.
ಕುಡಿಯುವ ನೀರಿನ ಬರ ಅನುಭವಿಸುತ್ತಿರುವ ವಿವಿಧ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ನಡೆದಿದೆ. ಈ ಸಂಬಂಧ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳ ಸಭೆ ಜಿಲ್ಲಾ„ಕಾರಿ ಕಚೇರಿಯಲ್ಲಿ ನಡೆಯಿತು. ಹೆಚ್ಚುವರಿ ದಂಡನಾ„ಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು.
ಬರಗಾಲ ತೀವ್ರವಾಗಿರುವ ಪ್ರದೇಶಗಳಿಗೆ ನೀರು ಪೂರೈಕೆ ವೇಳೆ ಆದ್ಯತೆ ನೀಡಬೇಕು. ಚುನಾವಣೆ ನೀತಿ ಸಂಹಿತೆ ಪೂರ್ಣ ರೂಪದಲ್ಲಿ ಪಾಲಿಸುವ ಮೂಲಕ ಸಿಬ್ಬಂದಿ ಕರ್ತವ್ಯ ನಡೆಸಬೇಕು ಎಂದು ಹೆಚ್ಚುವರಿ ದಂಡನಾಧಿಕಾರಿ ಈ ವೇಳೆ ತಿಳಿಸಿದರು.
ಜಿಲ್ಲೆಯ 7 ಗ್ರಾಮ ಪಂಚಾಯತ್‍ಗಳಲ್ಲಿ ಮತ್ತು ಒಂದು ನಗರಸಭೆ ವ್ಯಾಪ್ತಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ನಡೆಸಲಾಗುತ್ತಿದೆ. ಒಂದು ವಾರದ ಅವ„ಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೊಟೇಷನ್ ಮೂಲಕ ಗೊತ್ತುಮಾಡಿರುವ ವಾಹನಗಳಲ್ಲಿ ಬಾಡಿಗೆ ರೂಪದಲ್ಲಿ ನೀರಿನ ಸರಬರಾಜು ನಡೆಸಲಾಗುವುದು. ಈ ವೇಳೆ ಎಲ್ಲ ರೀತಿಯ ಮಾನದಂಡಗಳನ್ನೂ ಪಾಲಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳು ಇದರ ಖರ್ಚುವೆಚ್ಚವನ್ನು ಸ್ವಂತ ನೆಲೆಯಲ್ಲಿ ಕಂಡುಕೊಳ್ಳಬೇಕು. ಹೆಚ್ಚುವರಿ ಅಗತ್ಯವಿದ್ದರೆ ಸರಕಾರದಿಂದ ಒದಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧ ಪಟ್ಟವರು ಸಭೆಯಲ್ಲಿ ತಿಳಿಸಿದರು.
ಜಲ ವಿತರಣೆ ವೇಳೆ ಗುಣಮಟ್ಟದ ಖಚಿತತೆಯೂ ಇರಬೇಕು ಎಂದು ಹೆಚ್ಚುವರಿ ದಂಡನಾಧಿಕಾರಿ ತಿಳಿಸಿದರು. ಈಗ 328 ಕಿಯಾಸ್ಕ್‍ಗಳು ಜಿಲ್ಲೆಯಲ್ಲಿವೆ. ಹೆಚ್ಚುವರಿ ಕಿಯಾಸ್ಕ್‍ಗಳು ಅಗತ್ಯವಿದೆ ಎಂಬ ಕುರಿತು ಸ್ಥಳೀಯಾಡಳಿತ ಸಂಸ್ಥೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ. ಈ ಸಂಬಂಧ ಸರಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದವರು ಹೇಳಿದರು.
ತಾಪಮಾನ ಗರಿಷ್ಠ ಮಟ್ಟಕ್ಕೆ ತಲಪಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ದುಡಿಮೆಯ ಸಮಯ ಪುನರ್ ರಚಿಸಲಾಗಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ನಗರಸಭೆ-ಪಂಚಾಯತ್ ಅ„ಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಯಿತು. ಸಭೆಯಲ್ಲಿ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಟಿ.ಜೆ.ಅರುಣ್, ಹಿರಿಯ ವರಿಷ್ಠಾ„ಕಾರಿ ಕೆ.ವಿನೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.