ಸಹಾಯ ಧನ ಹಸ್ತಾಂತರ
0
ಏಪ್ರಿಲ್ 04, 2019
ಮಂಜೇಶ್ವರ: ಹೊಸಬೆಟ್ಟು ಜಮ್ಮದಮನೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ 2 ಲಕ್ಷ ರೂ.ಗಳ ಧನ ಸಹಾಯವನ್ನು ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ದೇವಸ್ಥಾನದ ಪದಾಧಿಕಾರಿಗಳಿಗೆ ಯೋಜನೆಯ ವಲಯ ನಿರ್ದೇಶಕ ಚಂದ್ರಶೇಖರ ಕೆ ಹಸ್ತಾಂತರಿಸಿದರು.
ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಘ್, ಜಮ್ಮದಮನೆ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ, ಉದ್ಯಾವರ ಮಾಡ ಕ್ಷೇತ್ರದ ಅಣ್ಣ ದೈವ ಪಾತ್ರಿ ರಾಜಾ ಬೆಳ್ಚಡ, ಸಂಜೀವ ಶೆಟ್ಟಿ ಮಾಡ, ಬಾಬು ಮಾಸ್ತರ್, ಯಾದವ ಬಡಾಜೆ, ಲಕ್ಷ್ಮೀ, ರಜನಿ, ಬಾಲಕೃಷ್ಣ ಶೆಟ್ಟಿ ಜಮ್ಮದಮನೆ, ಚೇತನ್ ಮೊದಲಾದವರು ಉಪಸ್ಥಿತರಿದ್ದರು.