ಅಡೂರಿನಲ್ಲಿ ತಾಳಮದ್ದಳೆ
0
ಏಪ್ರಿಲ್ 04, 2019
ಮುಳ್ಳೇರಿಯ: ಇತಿಹಾಸ ಪ್ರಸಿದ್ಧ ಅಡೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಸಂದರ್ಭದಲ್ಲಿ ಜಯರಾಮ ದೇವಸ್ಯ ಮತ್ತು ಬಳಗದಿಂದ `ಶ್ರೀರಾಮ ನಿರ್ಯಾಣ' ಎಂಬ ಕಥಾ ಭಾಗದ ಯಕ್ಷಗಾನ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಮಾಟೆ ಅಡೂರು, ತಲ್ಪನಾಜೆ ಶಿವಶಂಕರ ಭಟ್, ಚೆಂಡೆ ಮದ್ದಳೆಯಲ್ಲಿ ನಟರಾಜ ಕಲ್ಲೂರಾಯ ಮಧೂರು, ಪವನ್‍ರಾಜ್ ಕಲ್ಲೂರಾಯ ಮಧೂರು ಸಹಕರಿಸಿದರು. ಪಾತ್ರವರ್ಗದಲ್ಲಿ ರಾಧಾಕೃಷ್ಣ ಕಲ್ಚಾರ್, ಸರ್ಪಂಗಳ ಈಶ್ವರ ಭಟ್, ಹರೀಶ ಬಳಂತಿಮೊಗರು, ಜಯರಾಮ ದೇವಸ್ಯ, ಬಾಲಕೃಷ್ಣ ನೀರ್ಚಾಲು, ಸುಧಾ ನಟರಾಜ ಕಲ್ಲೂರಾಯ ಸಹಕರಿಸಿದರು.