ಮುಳ್ಳೇರಿಯ: ಕಯ್ಯಾರ ಕಿಂಞ್ಞಣ್ಣ ರೈ ವಾಚನಾಲಯ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ವಿಷು ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಡಾ.ರಮಣನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಗಾದರನ್ ಶುಭಹಾರೈಸಿದರು. ಕೆ.ಕೆ.ಮೋಹನನ್ ಸ್ವಾಗತಿಸಿ, ಚಂದ್ರನ್ ವಂದಿಸಿದರು.