ಕದನ ವಿರಾಮ ಉಲ್ಲಂಘನೆ: ಭಾರತದ ಡೆಪ್ಯೂಟಿ ಹೈಕಮಿಷನರ್ ಗೆ ಪಾಕ್ ಸಮನ್ಸ್
0
ಏಪ್ರಿಲ್ 04, 2019
ಇಸ್ಲಾಮಾಬಾದ್: ಭಾರತದ ಡೆಪ್ಯೂಟಿ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರಿಗೆ ಬುಧವಾರ ಸಮನ್ಸ್ ನೀಡಿರುವ ಪಾಕಿಸ್ತಾನ, ಕದನ ವಿರಾಮ ಉಲ್ಲಂಘಿಸಿದ ಭಾರತೀಯ ಸೇನೆಯ ಕ್ರಮವನ್ನು ಖಂಡಿಸಿದೆ.
ಏಪ್ರಿಲ್ 1 ಮತ್ತು 2 ರಂದು ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆ ನಡೆಸಿದ ಅಪ್ರಚೋದಿತ ಗುಂಡನಿ ದಾಳಿಯಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದು, ಈ ಸಂಬಂಧ ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಹಾಗೂ ಮಹಾ ನಿರ್ದೇಶಕ( ದಕ್ಷಿಣ ಏಷ್ಯಾ ಮತ್ತು ಸರ್ಕಾರ) ಡಾ.ಮೊಹಮ್ಮದ್ ಫೈಸಾಲ್ ಅವರು ಭಾರತೀಯ ಡೆಪ್ಯೂಟಿ ಹೈಕಮಿಷನರ್ ಅಹ್ಲುವಾಲಿಯಾ ಅವರನ್ನು ಕರೆಸಿಕೊಂಡು ಅಪ್ರಚೋದಿತ ದಾಳಿಯನ್ನು ಖಂಡಿಸಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ನಾಗರಿಕರನ್ನು ಮತ್ತು ಸೈನಿಕರನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದ್ದು ಖಂಡನೀಯ. ಮಾನವ ಘನತೆ ಮತ್ತು ಅಂತಾರಾಷ್ಟ್ರಿ?ಯ ಮಾನವ ಹಕ್ಕುಗಳ ಹಾಗೂ ಮಾನವಿ?ಯ ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 1ರಂದು ಭಾರತ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ 18 ವರ್ಷದ ಮಹಮ್ಮದ್ ಆತಿಕ್ ಎಂಬ ಯುವಕ ಮೃತಪಟ್ಟಿದ್ದು, ಏಪ್ರಿಲ್ 2ರಂದು ನಡೆದ ದಾಳಿಯಲ್ಲಿ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಫೈಸಾಲ್ ಹೇಳಿದ್ದಾರೆ.