ಪೆರ್ಲ: ಸಾಮಾನ್ಯವಾಗಿ ಪ್ರಕೃತಿಯಲ್ಲಿನ ಹಲವು ಪಕ್ಷಿಗಳಲ್ಲಿ ಮನುಷ್ಯನ ಹತ್ತಿರಕ್ಕೆ, ನೆರಳೂ ಸೋಕದಂತೆ ತಪ್ಪಿಸಿ ಬದುಕುವ ಜೀವಿಗಳಲ್ಲಿ ಕಾಗೆಯೂ ಒಂದು. ಪ್ರಕೃತಿಯ ಜಾಡಮಾಲಿಯಾದ ಕಾಗೆ ನೋಡಲು ಕರ್ರಗೆಯಾಗಿರುವುದರಿಂದ ಆಕರ್ಷಣೀಯವೂ ಅಲ್ಲ.
ಬೇಸಿಗೆ ಬೇಗೆಯಲ್ಲಿ ಬಳಲಿ ಬಾಯಾರಿದ ಕಾಗೆಯೊಂದಕ್ಕೆ ಮಣಿಯಂಪಾರೆಯ ಮಹೇಶ್ ಆಚಾರ್ಯ ಎಂಬವರು ನೀರುಣಿಸುವ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಯಾರ ನೆರಳಿಗೂ ಲಭಿಸದ ಕಾಗೆ ನೀರಿಲ್ಲದೆ ಕಂಗಾಲಾಗಿ ಮಹೇಶ್ ಆಚಾರ್ಯರ ಕೈಯಿಂದ ನೀರು ಸೇವಿಸಲು ಧೈರ್ಯವಹಿಸಿತೇ.ಗೊತ್ತಿಲ್ಲ. ಅಂತೂ ಕಾಗೆಗೆ ನೀರುಣಿಸಿದ ಮಹೇಶ್ ಆಚಾರ್ಯರಲ್ಲಿ ಇದೀಗ ಕೃತಾರ್ಥತೆ ಇದೆ.