ಕಾಸರಗೋಡು: ಕುಡಿಯುವ ನೀರು ವಿತರಣೆ ನಡೆಸುವ ಟ್ಯಾಂಕರ್ ಗಳಲ್ಲಿ ಮತ್ತು ಲಾರಿಗಳಲ್ಲಿ "ಕುಡಿಯುವ ನೀರು ವಿತರಣೆ" ಎಂದು ಬರೆದು ಪ್ರಕಟಪಡಿಸಬೇಕು ಎಂದು ಆಹಾರ ಸುರಕ್ಷೆ ಇಲಾಖೆ ತಿಳಿಸಿದೆ.
ಕುಡಿಯುವ ನೀರು ವಿತರಣೆ ನಡೆಸುವವರು ಆಹಾರ ಸುರಕ್ಷೆ ಪರವಾನಗಿ/ನೋಂದಣಿ ಪಡೆಯಬೇಕು. ಈ ಸಂಬಂಧ ವರದಿ ವಾಹನದಲ್ಲಿ ಇರಿಸಿಕೊಳ್ಳಬೇಕು. ನೀರಿನ ಗುಣಮಟ್ಟ ಖಚಿತಪಡಿಸಿದ ಜಲಾಶಯಗಳಿಂದ ಮಾತ್ರ ನೀರು ಸಂಗ್ರಹಿಸಬೇಕು ಎಂದು ಇಲಾಖೆ ತಿಳಿಸಿದೆ.
ಶೀತಲ ಪಾನೀಯ, ಜ್ಯೂಸ್ ಮಾರಾಟ ನಡೆಸುವವರು ಆಹಾರ ಸುರಕ್ಷೆ ಇಲಾಖೆಯ ಪರವಾನಗಿ ಪಡೆದು ಚಟುವಟಿಕೆ ನಡೆಸಬೇಕು. ಜ್ಯೂಸ್ ಇತ್ಯಾದಿ ಸಿದ್ಧಪಡಿಸುವ ನಿಟ್ಟಿನಲ್ಲಿ ಬಾಟಲಿ (ಪ್ಯೂರಿಫೈ ನಡೆಸಿದ) ನೀರು ಬಳಸಬೇಕು. ಕೊಳೆತ, ಕೊಳಕು ಹಣ್ಣುಗಳನ್ನು ಬಳಿ ರಸ ಸಿದ್ಧಪಡಿಸಬಾರದು. ಮಿಕ್ಸಿ ಸಹಿತ ಉಪಕರಣಗಳನ್ನು ಪ್ರತಿಬಾರಿಯ ಬಳಕೆ ನಂತರ ತೊಳೆದು ಶುದ್ಧಪಡಿಸಬೇಕು. ಮಂಜುಗಡ್ಡೆಯನ್ನು ಸ್ಟೀಲ್ ಪಾತ್ರೆಯಲ್ಲಿ ಮಾತ್ರ ಇರಿಸಬೇಕು.
ಐ.ಎಸ್.ಐ. ಮಾರ್ಕ್ , ಎಫ್.ಎಸ್.ಎಸ್.ಎ.ಐ. ಪರವಾನಗಿ ನಂಬ್ರ ಹೊಂದಿರುವ ಕುಡಿಯುವ ನೀರು ಮಾತ್ರ ಖರೀದಿಸಿ ಬಳಸಬೇಕು. ಕುಡಿಯುವ ನಿರು, ಜ್ಯೂಸ್ ಬಿಸಿಲಲ್ಲಿ ಇರಿಸಕೂಡದು. ಇವನ್ನು ಬಿಸಿಲು ತಾಗುವ ರೀತಿ ವಾಹನಗಳಲ್ಲಿ ರವಾನಿಸಬಾರದು ಎಂದು ಆಹಾರ ಸುರಕ್ಷೆ ಇಲಾಖೆ ತಿಳಿಸಿದೆ.
ಮಾಹಿತಿಗೆ ದೂರವಾಣಿ ಸಂಖ್ಯೆಗಳು: 04994256257, ಆಹಾರ ಸುರಕ್ಷೆ ಅಧಿಕಾರಿ ಮಂಜೇಶ್ವರ-89943346557, ಆಹಾರ ಸುರಕ್ಷೆ ಅಧಿಕಾರಿ ಕಾ?ಂಗಾಡ್-9539996216.