ನಾಳೆ ಅಂಬಿಲಡ್ಕದಲ್ಲಿ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ
0
ಏಪ್ರಿಲ್ 04, 2019
ಕುಂಬಳೆ: ಅಂಬಿಲಡ್ಕದ ಶ್ರೀಪೂಮಾಣಿ-ಕಿನ್ನಿಮಾಣಿ ದೈವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಉಜಾರು ಫ್ರೆಂಡ್ಸ್ ಉಜಾರು ಅವರ ನೇತೃತ್ವದಲ್ಲಿ ಏ.5 ರಂದು ಶುಕ್ರವಾರ ರಾತ್ರಿ 8 ರಿಂದ ಅಂಬಿಲಡ್ಕದಲ್ಲಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಕೃಪಾಪೋಶಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ರವಿಕುಮಾರ್ ಸುರತ್ಕಲ್ ವಿರಚಿತ ಬೊಳ್ಳಿದ ಬೊಲುಗುಡೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ರಾಮಚಂದ್ರ ರೈ ಕಡಬ, ಗಿರೀಶ್ ರೈ ಕಕ್ಕೆಪದವು, ಕೀರ್ತನ್ ವಗೆನಾಡು, ಪುರುಷೋತ್ತಮ ಆಚಾರ್ಯ ದುಗ್ಗುಲಡ್ಕ, ಸತೀಶ್ ಡಿಕೋಸ್ತಾ, ಪ್ರಕಾಶ್ ವಿಟ್ಲ, ಗಣೇಶ್ ಭಟ್ ನೆಕ್ಕರೆಮೂಲೆ, ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ವಗೆನಾಡು, ವೇಣೂರು ಸತೀಶ್ ಆಚಾರ್ಯ, ಯುವರಾಜ್ ಆಚಾರ್ಯ, ರಾಜೇಂದ್ರ ಕೃಷ್ಣ ಭಾಗವಹಿಸುವರು. ಮುಮ್ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟಿ, ಮಧೂರು ರಾಧಾಕೃಷ್ಣ ನಾವಡ, ಪಂಜ ಗುಡ್ಡಪ್ಪ ಸುವರ್ಣ, ತಿಲಕ್ ಹೆಗ್ಡೆ ಪುತ್ತೂರು, ರಾಕೇಶ್ ರೈ ಅಡ್ಕ, ಮಾಧವ ಕೊಳ್ತಮಜಲು, ರಾಮಕೃಷ್ಣ ನಂದಿಕೂರು, ಸುರೇಶ್ ಕುಮಾರ್ ಅರಳ, ಸಾಣೂರು ಗಣೇಶ್ ಶೆಟ್ಟಿ, ಸುರೇಶ್ ಹೆಗ್ಡೆ ಬಂಗಾಡಿ, ಸಂತೋಷ್ ಕರಂಬಾರ್, ಹರಿಪ್ರಸಾದ್, ಜಯಕುಮಾರ್ ಅರಳ, ಗಣೇಶ್ ಕುಮಾರ್, ಚರಣ್ ಪೆರಾರ, ಸೀತಾರಾಮ ಕಜೆಕೋಡಿ, ಪರಮೇಶ್ವರ ಗಂಗನಾಡು,ಮಹೇಶ್ ಸಾಲ್ಯಾನ್, ಸುದರ್ಶನ ಸೂರಿಂಜೆ, ಕಾರ್ತಿಕ್ ಗಂಜಿಮಠ, ದಿಣೇಶ್ ಶೆಟ್ಟಿಗಾರ ಕೋಡಪದವು,ಮಚ್ಚೂರು ಮೋಹನ ದೇವಾಡಿಗ ಮೊದಲಾದ ಕಲಾವಿದರು ವಿವಿಧ ಪಾತ್ರಗಳನ್ನು ನಿರ್ವಹಿಸುವರು.