HEALTH TIPS

ಪೆರಿಯದಲ್ಲಿ ರಾಘವೇಶ್ವರ ಶ್ರೀಗಳಿಗೆ ಅದ್ಧೂರಿಯ ಸ್ವಾಗತ


          ಬದಿಯಡ್ಕ: ಪೆರಿಯದ ಪೆರಿಯೋಕ್ಕಿ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಕ್ಷೇತ್ರ ನವೀಕರಣ - ದ್ರವ್ಯಕಲಶ ಮಹೋತ್ಸವದ ಸಂದರ್ಭದಲ್ಲಿ ಹೊಸನಗರ ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಶ್ರೀ ಕ್ಷೇತ್ರ ಸೇವಾಸಮಿತಿಯ ಪದಾಧಿಕಾರಿಗಳು ಮತ್ತು ಊರ ಭಕ್ತವೃಂದವರು ಅದ್ಧೂರಿಯ ಸ್ವಾಗತವನ್ನು ನೀಡಿ ಶ್ರೀಕ್ಷೇತ್ರಕ್ಕೆ ಬರಮಾಡಿಕೊಂಡರು.
    ಚೆಂಡೆ ವಾದ್ಯಘೋಷಗಳೊಂದಿಗೆ ಶ್ರೀಗಳು ಶ್ರೀ ಕ್ಷೇತ್ರಕ್ಕೆ ಚಿತ್ತೈಸಿ ದೇವದರ್ಶನ ಮಾಡಿದರು.
     ಬಳಿಕ ಧಾರ್ಮಿಕ ಸಭಾಕಾರ್ಯಕ್ರಮ ಜರಗಿತು. ಕ್ಷೇತ್ರ ಸೇವಾಸಮಿತಿಯ ಕಾರ್ಯದರ್ಶಿ ಪ್ರಮೋದ್ ಪೆರಿಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸೇವಾಸಮಿತಿಯ ಅಧ್ಯಕ್ಷ ನಾರಾಯಣನ್ ಫಲಸಮರ್ಪಣೆಮಾಡಿದರು. ಶ್ರೀಗಳು ಆಶೀರ್ವಚನ ನೀಡಿ ಸೇರಿದ ಭಕ್ತವೃಂದದವರಿಗೆ ಅನುಗ್ರಹ ಮಂತ್ರಾಕ್ಷತೆಗಳನ್ನಿತ್ತು ಆಶೀರ್ವದಿಸಿದರು.
    ಕ್ಷೇತ್ರ ಸೇವಾಸಮಿತಿಯ ಗೌರವಾಧ್ಯಕ್ಷರೂ ಪೆರಿಯ ಗೋಗಂಗಾ ಪಂಚಗವ್ಯಚಿಕಿತ್ಸಾ ಕೇಂದ್ರದ ಸಂಚಾಲಕರೂ ಆಗಿರುವ ವಿಷ್ಣುಪ್ರಸಾದ್ ಪೂಚಕ್ಕಾಡ್ ಸಮಾರಂಭ ಸಂಯೋಜನೆ ಮಾಡಿದ್ದರು.
   ಈ ಸಂದರ್ಭದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಪದಾಧಿಕಾರಿಗಳಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮಹೇಶ್ ಸರಳಿ, ಭವನೀತಪ್ರಿಯ ಕೈಪ್ಪಂಗಳ, ಮಹಾಮಂಡಲದ ಗೋವಿಂದ ಬಳ್ಳಮೂಲೆ, ವಿವಿಧ ವಲಯಗಳ ಪದಾಧಿಕಾರಿಗಳಾದ ವೈ. ವಿ. ರಮೇಶ ಭಟ್, ಈಶ್ವರ ಭಟ್ ಉಳುವಾನ, ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಗಣೇಶ್ ಕೋಂಗೋಟು, ಕೃಷ್ಣರಾಜ ಪುಣೂರು ಮೊದಲಾದವರು ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries