ಕಾಸರಗೋಡು: ಆರ್.ಎಸ್.ಎಸ್. ಹಾಗು ಬಿಜೆಪಿ ಶಕ್ತಿಶಾಲಿಯಾಗಿರದ ಕೇರಳದಲ್ಲಿ ಬಿಜೆಪಿ ವಿರುದ್ಧ ಪೈಪೆÇೀಟಿ ನಡೆಸುವುದು ನಾವು ಎಂದು ಹೇಳುತ್ತಿರುವ ಸಿಪಿಎಂಗೆ ಬಿಜೆಪಿ ಭದ್ರವಾಗಿರುವ ಪ್ರಧಾನಿ ಮೋದಿ ಅವರ ರಾಜ್ಯದಲ್ಲಿ ಸ್ಪರ್ಧಿಸಲು ಧೈರ್ಯವಿದೆಯೇ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಎ.ಕೆ.ಆ್ಯಂಟಣಿ ಪ್ರಶ್ನಿಸಿದ್ದಾರೆ.
ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಚುನಾವಣಾ ಪ್ರಚಾರಾರ್ಥ ಭಾನುವಾರ ಬೆಳಿಗ್ಗೆ ಕಾಸರಗೋಡಿಗೆ ಬಂದ ಎ.ಕೆ.ಆ್ಯಂಟಣಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಸಿಪಿಎಂ ಸ್ವತ: ನಾಶವಾಗುವ ಸ್ಥಿತಿಯತ್ತ ಸಾಗಿದೆ. ಇದನ್ನು ತಿಳಿಯಲಾಗದೆ ಇದೀಗಲೂ ಕಾಂಗ್ರೆಸ್‍ನೊಂದಿಗೆ ದ್ವೇಷ ಸಾ„ಸಹೊರಟಿದೆ. ಇದು ದೇಶಕ್ಕೆ ಹಿತವಲ್ಲ. ಸಿಪಿಎಂ ಯಾರಿಗೂ ಬೇಡದಂತಾಗಿದೆ. ಆ ಪಕ್ಷ ಮೇಣದ ಬತ್ತಿಯಂತೆ ಉರಿದು ಮುಗಿಯುತ್ತದೆಯೆಂದೂ ಆ್ಯಂಟಣಿ ಅಭಿಪ್ರಾಯಪಟ್ಟರು.
ಕೇರಳದಲ್ಲಿ ಕಾಂಗ್ರೆಸ್ ಹಾಗು ಯುಡಿಎಫ್‍ನ ಸೀಟುಗಳು ಕಡಿಮೆಯಾಗುವುದು ಕೇಂದ್ರದಲ್ಲಿ ಮೋದಿಗೆ ಸಹಾಯಕವಾಗಲಿದೆ. ಆದ್ದರಿಂದ ಈ ಚುನಾವಣೆಯನ್ನು ಪ್ರಬಲ ಹೋರಾಟವಾಗಿಯೇ ಕಾಂಗ್ರೆಸ್ ಪರಿಗಣಿಸಿದೆ. ಬಿಜೆಪಿ ವಿರುದ್ಧ ಹೋರಾಡಲು ರಾಹುಲ್ ಗಾಂ„ಯಲ್ಲದೆ ದೇಶದಲ್ಲಿ ಬೇರೆ ಯಾರಿದ್ದಾರೆ. ಮೋದಿಯೆಂಬ ವ್ಯಕ್ತಿಯನ್ನಲ್ಲ. ದೇಶಕ್ಕೆ ಮಾರಕವಾದ ಅವರ ನಿಲುವುಗಳನ್ನು ವಿರೋಧಿಸಲಾಗುತ್ತಿದೆ. ಬಿಜೆಪಿ ಹಾಗು ಆರ್‍ಎಸ್‍ಎಸ್‍ನ ನೀತಿ ದೇಶದಲ್ಲಿ ಐಕ್ಯತೆಗೆ ಅಪಾಯವಾಗಿದೆ. ಆದರೆ ದೇಶದಲ್ಲಿ ಐಕ್ಯತೆಯೊಂದಿಗೆ ಜನರನ್ನು ಒಗ್ಗೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆಯೆಂದೂ ಆ್ಯಂಟಣಿ ಹೇಳಿದರು.
ರಾಹುಲ್ ಗಾಂಧಿ ವಯನಾಡುನಲ್ಲಿ ಸ್ಪರ್ಧಿಸುವುದು ಕೇರಳದಲ್ಲಿ ಯುಡಿಎಫ್‍ಗೆ ಹುಮ್ಮಸ್ಸು ಮೂಡಿಸಿದೆ. ಕೇರಳದಲ್ಲಿ ರಾಹುಲ್ ಅಲೆ ಬೀಸಲಿದೆಯೆಂದೂ ಅವರು ಅಭಿಪ್ರಾಯಪಟ್ಟರು.
ಮಾವೇಲಿ ಎಕ್ಸ್‍ಪ್ರೆಸ್‍ನಲ್ಲಿ ಎ.ಕೆ.ಆ್ಯಂಟಣಿ ಆಗಮಿಸಿದ್ದು ಕಾಸರಗೋಡು ರೈಲು ನಿಲ್ದಾಣದಲ್ಲಿ ಸ್ವಾಗತ ನೀಡಲಾಯಿತು. ರೈಲು ನಿಲ್ದಾಣದಲ್ಲಿ ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್, ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್, ಯುಡಿಎಫ್ ಜಿಲ್ಲಾ ಸಂಚಾಲಕ ಗೋವಿಂದನ್ ನಾಯರ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಗೋವಿಂದನ್ ನಾಯರ್ ಮೊದಲಾದವರಿದ್ದರು.