ನಾಮಸ್ಮರಣೆಯಿಂದ ದೈವತ್ವದ ಕಡೆಗೆ : ಕೊಂಡೆವೂರು ಶ್ರೀ
0
ಏಪ್ರಿಲ್ 05, 2019
ಮಂಜೇಶ್ವರ: ಉದ್ಯಾವರ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಕೋಮರಾಯ ಚಾಮುಂಡೇಶ್ವರಿ ದೈವಸ್ಥಾನದ ಪುನರ್‍ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವ ವಿಜೃಂಭಣೆಯಿಂದ ಗುರುವಾರ ಜರಗಿತು.
ಕಾರ್ಯಕ್ರಮದ ಅಂಗವಾಗಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ನರಿಂಗಾನ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಭಗವಂತನನ್ನು ಸದಾ ನಾಮಸ್ಮರಣೆ ಮಾಡಿದರೆ ಅಂತರಾಳದಲ್ಲಿರುವ ಮನಸ್ಸನ್ನು ದೇವರು ದೈವತ್ವದ ಕಡೆಗೆ ಸಾಗಿಸುತ್ತಾರೆ. ಸದಾ ಶುದ್ಧ ಹಸ್ತರಾಗಿರಬೇಕು. ಹಿರಿಯರನ್ನು ಗೌರವಿಸಬೇಕು. ಭಗವಂತ ನೀಡಿದ ದೇಹವನ್ನು ಸಮಾಜದ ಏಳಿಗೆಗೆ ನೀಡಬೇಕೆಂದು ಶ್ರೀ ಸ್ವಾಮೀಜಿಗಳು ನುಡಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಉದ್ಯಾವರ ಮಾಡ ಕ್ಷೇತ್ರದ ದಯಾಕರ ಉದ್ಯಾವರ ಮಾಡ, ಹೊಸಂಗಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಉಪಾಧ್ಯಕ್ಷ ಗಂಗಾಧರ ಕೊಂಡೆವೂರು, ಮಂಜೇಶ್ವರ ಶ್ರೀ ಕೀರ್ತೇಶ್ವರ ದೈವಸ್ಥಾನದ ಅಧ್ಯಕ್ಷರಾದ ತುಕಾರಾಮ ಮಾನಿಂಜ, ತೂಮಿನಾಡು ಶ್ರೀ ಮಹಾಕಾಳಿ ದೈವಸ್ಥಾನದ ಅಧ್ಯಕ್ಷ ಎಂ.ಜಯಂತ, ಮುಟ್ಟಗ್ರಾಮ ಚಾವಡಿಯ ಶಶಿಧರ ಶೆಟ್ಟಿ, ಮಂಗಳೂರು ಗ್ರಾಮಾಂತರ ಕಾಸರಗೋಡು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯ ಶಶಿಕಲ ಪ್ರಕಾಶ್ ಬಂಗೇರ, ಕಾಸರಗೋಡು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಂಗಾರ ಶ್ರೀಪಾದ, ಶ್ರೀರಾಮ ಮಂಗಲ್ಪಾಡಿ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಬಿ.ಎಂ.ಬಾಬು ಮಾಸ್ತರ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಉದ್ಯಾವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.