ಬದಿಯಡ್ಕ: ಕುಂಬಳೆ ಸೀಮೆಯ ಪುತ್ರಕಳ ಬೂಡಿನಲ್ಲಿ ಕಂಡುಬಂದಿರುವ ತುಳುನಾಡ ಕಳರಿಯ ಅಧಿ ದೈವದ ಸಾನಿಧ್ಯದ ಕುರಿತು ಅಧ್ಯಯನಾತ್ಮಕ ಕೆಲಸಗಳು ನಡೆಯಬೇಕಾಗಿದ್ದು, ಗತ ವರ್ಷದ ಇತಿಹಾಸಕ್ಕೆ ಬೆಳಕು ಚೆಲ್ಲುವ ಕಳರಿ ಧೂಮಾವತಿಯ ಸಾನಿಧ್ಯ ಇಲ್ಲಿ ಲಭಿಸಿರುವುದು ತುಳುನಾಡಿಗರ ಸೌಭಾಗ್ಯ ಎಂದು ಖ್ಯಾತ ಜನಪದ ವಿದ್ವಾಂಸ, ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್ ಅಭಿಪ್ರಾಯಪಟ್ಟರು.
ಸುಮಾರು 1800 ವರ್ಷದ ಪ್ರಾಚೀನತೆ ಇರುವ ಪುತ್ರಕಳ ಬೂಡು ಜೀರ್ಣೋದ್ಧಾರ ಕಾರ್ಯದಂಗವಾಗಿ ಇತ್ತೀಚೆಗೆ ಏರ್ಪಡಿಸಿದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಪ್ರಾಚೀನ ಆಳ್ವಿಕೆ, ಆರಾಧನೆ ಹಾಗೂ ನಾಡಿನ ಪರಿಪಾಲನೆಗೆ ಹೆಸರುವಾಸಿಯಾಗಿದ್ದ ಈ ಬೂಡು ಇದೀಗ ಜೀರ್ಣೋದ್ಧಾರಕ್ಕೆ ಮುಂದಾಗಿರುವುದು ತುಳುನಾಡಿನ ಚರಿತ್ರೆಗೊಂದು ಮೈಲುಗಲ್ಲಾಗಲಿದೆ ಎಂದರು.
ಕ್ಷೇತ್ರದ ತಂತ್ರಿಗಳಾದ ಅರವಿಂದ ಕುಮಾರ ಅಲೆವೂರಾಯ ನೇರಪ್ಪಾಡಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಒಂದು ಕುಂದು ನಲ್ವತ್ತು ದೈವ ಸಾನಿಧ್ಯ ಇರುವ ಪುತ್ರಕಳ ಬೂಡು ಹಿಂದಿನ ಅದೇ ಗತ ವೈಭವದಲ್ಲಿ ಭಕ್ತಜನ ಸಹಕಾರದಲ್ಲಿ ಜೀರ್ಣೋದ್ಧಾರಗೊಳ್ಳಲಿ ಎಂದರು. ಸಂಶೋಧಕ, ಜಾನಪದ ಸಂಗ್ರಹಗಾರ ಕೇಶವ ಶೆಟ್ಟಿ ಅದೂರು ಮಾತನಾಡಿ, ಈ ಬೂಡಿನಲ್ಲಿ ಪ್ರಧಾನಿಯಾಗಿರುವ ಕುಂಡಗರ ದೈವದ ಚರಿತ್ರೆ ತುಳುನಾಡಿನ ಇತಿಹಾಸದಲ್ಲಿಯೇ ಅನನ್ಯವಾದುದು. ಇದನ್ನು ನಾಡಿಗೆ ತಿಳಿಸುವ ಪ್ರಯತ್ನವಾಗಬೇಕಿದೆ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಅಖಿಲ ಭಾರತ ಲೋಕ ಕಲಾ ಪರಿಷತ್ ಸದಸ್ಯ ಡಾ.ರಾಜೇಶ್ ಆಳ್ವ ಮಾತನಾಡಿ, ತುಳುನಾಡ ಕಳರಿಕಲೆ ಇದೀಗ ಕೇರಳ ರಾಜ್ಯದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದರೂ ಅದರ ಮೂಲ ಇಲ್ಲಿದೆ ಎಂಬುದು ದೈವಿಕವಾದ ಸತ್ಯವಾಗಿದೆ. ಈ ಹಿಂದೆ ರಾಜಾಡಳಿತ ಕಾಲದಲ್ಲಿ ಯುದ್ಧಕ್ಕಾಗಿ ಕಳರಿಯನ್ನು ಅಭ್ಯಸಿಸುವ ಗರಡಿ ಕೇಂದ್ರಗಳು ಇಲ್ಲಿ ಕಂಡು ಬರುತ್ತಿದ್ದು ಕೆಲವೆಡೆ ಇತಿಹಾಸವನ್ನು ತಿರುಚುವ ಪ್ರಯತ್ನಕ್ಕೆ ಇಂತಹ ಸಾನಿಧ್ಯಗಳು ಸ್ಪಷ್ಟ ಹೆಗ್ಗುರುತು ಆಗಬಲ್ಲುದು ಎಂದರು.
ಪುತ್ರಕಳ ಕುಟುಂಬದ ಹಿರಿಯರಾದ ಬೈಂಕಿ ಭಂಡಾರಿ ಪುತ್ರಕಳ ಸಭೆಯ ಅಧ್ಯಕ್ಷತೆವಹಿಸಿದ್ದರು. ಇಡಿಯಡ್ಕ ಶ್ರೀದುರ್ಗಾಪರಮೇಶ್ವರಿ ಉಳ್ಳಾಲ್ತಿ ವಿಷ್ಣುಮೂರ್ತಿ ಕ್ಷೇತ್ರದ ಪ್ರ.ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ ಅವರು ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿದರು. ರಮಾನಾಥ ರೈ ಕಡಾರು, ದೇವಾನಂದ ಶೆಟ್ಟಿ ಕುದ್ರೆಪ್ಪಾಡಿ, ಜಯ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು. ಹರ್ಷ ರೈ ಪುತ್ರಕಳ ಪ್ರಾಸ್ತಾವಿಕವಾಗಿ ಮಾತನಾಡಿ ಬೂಡಿನ ಇತಿಹಾಸದ ಬಗ್ಗೆ ಲಭ್ಯ ಮಾಹಿತಿ ನೀಡಿದರು. ಬಾಲಕೃಷ್ಣ ರೈ ಶೇಣಿ ಸ್ವಾಗತಿಸಿ, ಕಿಶೋರ್ ಆಳ್ವ ಪುತ್ರಕಳ ವಂದಿಸಿದರು. ಪ್ರಜ್ವಲ್ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.