ಕುಂಬಳೆ : ಕುಂಬ್ಳೆ ಬಿಜೆಪಿ ಪಂಚಾಯತಿ ಸಮಿತಿ ವತಿಯಿಂದ ಗುರುವಾರ ಬಿಜೆಪಿಯ ಹಿರಿಯ ನೇತಾರರಾದ ದಿವಂಗತ ಕೆ.ಜಿ.ಮಾರಾರ್ ಅವರ 24 ನೇ ಸಂಸ್ಮರಣೆಯನ್ನು ಕುಂಬ್ಳೆ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.
ಬಿಜೆಪಿ ಕುಂಬ್ಳೆ ಪಂಚಾಯತಿ ಅಧ್ಯಕ್ಷ ಕೆ.ಶಂಕರ ಆಳ್ವ ಅವರು ಅಧ್ಯಕ್ಷತೆ ವಹಿಸಿ ಮರಾರ್ ಜಿ ಆದರ್ಶವನ್ನು ಕಾರ್ಯಕರ್ತರು ಪಾಲಿಸಬೇಕೆಂದು ತಿಳಿಸಿದರು. ಮಂಡಲ ಉಪಾಧ್ಯಕ್ಷ ಕೆ.ವಿನೋದನ,ಜಿಲ್ಲಾ ಸಮಿತಿ ಸದಸ್ಯ ಕೆ.ರಮೇಶ್ ಭಟ್,ಪಂಚಾಯತಿ ಉಪಾಧ್ಯಕ್ಷ ಕಮಲಾಕ್ಷ ಆರಿಕ್ಕಾಡಿ ,ಪಂಚಾಯತಿ ಸದಸ್ಯ ಕೆ.ಹರೀಶ್ ಗಟ್ಟಿ,ಹಿರಿಯ ಕಾರ್ಯಕರ್ತ ವೇಣು, ಹಿಂದೂ ಐಕ್ಯವೇದಿ ಕುಂಬ್ಳೆ ಗಟಕ ಉಪಾಧ್ಯಕ್ಷ ಪ್ರದೂಷ ಭಾಗವಹಿಸಿದರು.ಬಿಜೆಪಿ ಪ್ರದಾನ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ಸ್ವಾಗತಿಸಿ, ಸಂಜಿತ್ ವಂದಿಸಿದರು.