ಕನಿಲದಲ್ಲಿ ಭರಣಿ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಧ್ವಜಾರೋಹಣದೊಂದಿಗೆ ಚಾಲನೆ
0
ಏಪ್ರಿಲ್ 03, 2019
ಮಂಜೇಶ್ವರ: ಕನಿಲ ಶ್ರೀಭಗವತೀ ಕ್ಷೇತ್ರದ ವಾರ್ಷಿಕ ಭರಣಿ ಮಹೋತ್ಸವಕ್ಕೆ ಮಂಗಳವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಧ್ವಜಾರೋಹಣ ನೆರವೇರುವುದರೊಂದಿಗೆ ವಿದ್ಯುಕ್ತ ಚಾಲನೆಡ ನೀಡಲಾಯಿತು.
ಸೋಮವಾರ ಅಪರಾಹ್ನ 3ಕ್ಕೆ ಶ್ರೀಕ್ಷೇತ್ರದ ಭಂಡಾರ ನಿಲಯದಿಂದ ಭಂಡಾರ ಹೊರಟು ಸನ್ನಿಧಿಗೆ ಆಗಮಿಸಿತು. ಸಂಜೆ 5ಕ್ಕೆ ಭಂಡಾರ ನಿಲಯದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟು ಆಗಮಿಸಿತು, ರಾತ್ರಿ 7 ರಿಂದ ಭಜನಾ ಸಂಕೀರ್ತನ ನಡೆಯಿತು.
ಮಂಗಳವಾರ ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7.30ರಿಂದ ಸ್ಥಳೀಯ ಮಕ್ಕಿಳಿಂದ ನೃತ್ಯ ವೈವಿಧ್ಯ, ಬಳಿಕ ಮಂಗಳೂರಿನ ಚಾಪರ್ಕ ಕಲಾವಿದರಿಂದ ಪುಷ್ಪಕ್ಕನ ಇಮಾನ ತುಳು ನಾಟಕ ಪ್ರದರ್ಶನ ನಡೆಯಿತು. ರಾತ್ರಿ 12 ರಿಂದ ನಡಾವಳಿ ಉತ್ಸವ, ಬಿಂಬ ಪ್ರದರ್ಶನಗಳು ನೆರವೇರಿತು. ಏ.8 ರಂದು ಉತ್ಸವ ಸಮಾರೋಪಗೊಳ್ಳಲಿದೆ.