ಕಾಸರಗೋಡು: ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ರಜಾದಿನಗಳ ಶಿಬಿರ, ತರಗತಿಗಳು ಸಹಿತ ಕಾರ್ಯಕ್ರಮಗಳು ನಡೆಯುತ್ತಿದ್ದು, ಇವುಗಳಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಏ.23ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾನ ನಡೆಸುವಿಕೆಗೆ ಈ ಶಿಬಿರ ಇತ್ಯಾದಿಗಳು ತಡೆಯಾಗಕೂಡದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ವಿದ್ಯಾರ್ಥಿಗಳ ಮತದಾನಕ್ಕೆ ತಡೆಯಾದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತಿಳಿಸಿದರು. ಮತದಾನದ ದಿನ ವಿಶೇಷ ತರಗತಿ ನಡೆಸಕೂಡದು ಎಂದವರು ಹೇಳಿದರು.
ರಜಾ ದಿನಗಳ ಶಿಬಿರ ಇತ್ಯಾದಿಗಳು ವಿದ್ಯಾರ್ಥಿಗಳ ಮತದಾನಕ್ಕೆ ತಡೆಯಾಗಕೂಡದು: ಜಿಲ್ಲಾಧಿಕಾರಿ
0
ಏಪ್ರಿಲ್ 20, 2019