HEALTH TIPS

ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಸಂಸ್ಮರಣೆ ಹಾಗೂ ಪುಸ್ತಕ ಬಿಡುಗಡೆ

     ಬದಿಯಡ್ಕ: ಅಧ್ಯಾಪನ ವೃತ್ತಿಯ ಜೊತೆಗೆ ಬಹಳ ಆಸಕ್ತಿಯಿಂದ ಜನಪದ ಸಾಹಿತ್ಯವನ್ನು ಸಂಗ್ರಹಿಸುವ ಮೂಲಕ ಉತ್ತಮ ಕೊಡುಗೆ ನೀಡಿರುವ ದಿ. ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಕಾರ್ಯ ಗುರುತರವಾದದ್ದು ಎಂದು ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ, ಸಾಹಿತಿ ಡಾ. ಹರಿಕೃಷ್ಣ ಭರಣ್ಯ ಹೇಳಿದರು.
     ಅವರು ಪೆರಡಾಲ ದೇವಸ್ಥಾನ ಸಮೀಪ ಪಂಜಿತ್ತಡ್ಕದ ಶ್ರೀಕೃಷ್ಣ ನಿಲಯದಲ್ಲಿ ಸಾಹಿತಿ, ಸಂಶೋಧಕ, ಅಧ್ಯಾಪಕ ದಿ. ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಕಾಸರಗೋಡಿನ ಕನ್ನಡಿಗರ ಜನಪದ ನಂಬಿಕೆಗಳು ಎಂಬ ಸಂಶೋಧನಾ ಕೃತಿಯ ಬಿಡುಗಡೆಯನ್ನು ಗುರುವಾರ ನೆರವೇರಿಸಿ ಸಂಸ್ಮರಣಾ ಭಾಷಣ ಮಾಡಿ ಮಾತನಾಡಿದರು.
    ಪಿಕೆಶ್ರೀ ಜೊತೆಗಿನ ಪರಿಚಯ ಒಡನಾಟ ನೆನಪುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಮಧುರೈಯಲ್ಲಿ ಶ್ರೀಯುತರು ನಡೆಸಿದ ಕನ್ನಡ ಚಟುವಟಿಕೆಗಳು ಅವರೊಬ್ಬ ಉತ್ತಮ ಸಂಘಟಕನೂ ಹೌದೆಂಬುದನ್ನು ಸಾಬೀತುಪಡಿಸುತ್ತದೆ ಎಂದರು.
       ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿ, ತನ್ನ ಪಿ.ಕೆ.ಶ್ರೀಕೃಷ್ಣ ಭಟ್ ಅವರು ತಮ್ಮ ವ್ಯಕ್ತಿತ್ವದ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾರೆ. ಬಹಳ ವಿಶಿಷ್ಟ ವ್ಯಕ್ತಿತ್ವದ ಅವರು ನಮಗೆಲ್ಲರಿಗೂ ಮಾದರಿಯಾಗಿದ್ದರು. ಅವರ ಪರಿಶ್ರಮಪೂರ್ಣ ಸಂಶೋಧನಾ ಕಾರ್ಯವು ಇದೀಗ ಪ್ರಕಟಗೊಂಡಿರುವುದು ಶ್ಲಾಘನೀಯ ವಿಚಾರವೆಂದರು.
      ಕಾರ್ಯಕ್ರಮದಲ್ಲಿ ಕುಂಬಳೆ ಉಪಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ, ಪಿಕೆಶ್ರೀ ಅವರ ಸಹೋದ್ಯೋಗಿಗಳಾಗಿದ್ದ ಅಡ್ಕ ಸುಬ್ರಹ್ಮಣ್ಯ ಭಟ್, ಉಪ್ಪಂಗಳ ವೆಂಕಟ್ರಮಣ ಭಟ್, ವಿದ್ಯಾರ್ಥಿನಿಯಾಗಿದ್ದ ಲಕ್ಷ್ಮಿ ಎಂ.ಎ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಟಿ.ಶಂಕರನಾರಾಯಣ ಭಟ್, ಮೈರ್ಕಳ ನಾರಾಯಣ ಭಟ್, ಕೇಶವ ಪ್ರಸಾದ್ ಅವರು ತಮ್ಮ ಅನುಭವ, ನೆನಪುಗಳನ್ನು ಹಂಚಿಕೊಂಡರು.
  ದಿ. ಪಿಕೆಶ್ರೀ ಅವರ ಧರ್ಮಪತ್ನಿ ಪೈಕ ಶಾಲಾ ಅಧ್ಯಾಪಕಿ ಸೀತಾಲಕ್ಷ್ಮಿ ಪಂಜಿತ್ತಡ್ಕ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸುಗಮ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀಶ ಕುಮಾರ ಪಂಜಿತ್ತಡ್ಕ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸುಮಂಗಲ ಶಿವರಾಮ ಭಟ್ ಮುಳಿಯಾಲ ವಂದಿಸಿದರು.ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು. ಎಲ್ಲರಿಗೂ ಪುಸ್ತಕ ವಿತರಿಸಲಾಯಿತು. ಉಪಸ್ಥಿತರಿದ್ದ ಶಾಲಾ ಕಾಲೇಜುಗಳ ಪ್ರತಿನಿಧಿಗಳ ಮೂಲಕ ಗ್ರಂಥಾಲಯಕ್ಕೂ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries