HEALTH TIPS

ಮತಯಂತ್ರಗಳ ವಿತರಣೆ : ಚುನಾವಣಾ ಸಾಮಾಗ್ರಿ ಮತಗಟ್ಟೆಗೆ

         ಕಾಸರಗೋಡು: ದೀರ್ಘ ಚುನಾವಣಾ ಪ್ರಚಾರಕ್ಕೆ ಏ.21 ರಂದು ಸಂಜೆ 6 ಗಂಟೆಗೆ ವೈವಿಧ್ಯಮಯ ಅಬ್ಬರದ ತೆರೆ ಬಿದ್ದಿದ್ದು, ಇಂದು (ಮಂಗಳವಾರ) ನಡೆಯುವ ಮತದಾನಕ್ಕೆ ಚುನಾವಣಾ ಸಾಮಗ್ರಿಗಳನ್ನು ಆಯಾಯ ಮತಗಟ್ಟೆಗೆ ಸಾಗಿಸಲಾಯಿತು.
       ಕಾಸರಗೋಡು ಸರಕಾರಿ ಕಾಲೇಜು ಮತ್ತು ಪಡನ್ನಕ್ಕಾಡ್ ನೆಹರೂ ಕಲಾ ವಿಜ್ಞಾನ ಕಾಲೇಜುಗಳಲ್ಲಿ ಸಾಮಾಗ್ರಿಗಳ ವಿತರಣೆ ಸೋಮವಾರ ನಡೆಯಿತು. ಬೆಳಿಗ್ಗೆ 8 ರಿಂದ ಚುನಾವಣಾ ಸಾಮಗ್ರಿಗಳನ್ನು ವಿತರಿಸಲಾಯಿತು.
        ಈ ಕೇಂದ್ರಗಳಲ್ಲಿ ಪ್ರತೀಯೊಂದು ವಿಧಾನಸಭಾ ಕ್ಷೇತ್ರಗಳಿಗೆ ಸಜ್ಜುಗೊಳಿಸಿದ್ದ ಕೌಂಟರ್‍ಗಳ ಮೂಲಕ ಆಯಾಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಬೆಳಿಗ್ಗೆ ವಿತರಣೆ ಆರಂಭಿಸಲಾಗಿತ್ತು. ಆಯಾಯ ಮತಗಟ್ಟೆಗಳಿಗೆ ನೀಡುವ ಸಿಂಗಲ್ ಪೆÇೀಸ್ಟ್ ಇಲೆಕ್ಟ್ರೋನಿಕ್ ವೋಟಿಂಗ್ ಯಂತ್ರಗಳನ್ನು ಕಾಸರಗೋಡು ಸರಕಾರಿ ಕಾಲೇಜು ಮತ್ತು ಪಡನ್ನಕ್ಕಾಡ್‍ನ ನೆಹರೂ ಆಟ್ರ್ಸ್ ಮತ್ತು ಸಯನ್ಸ್ ಕಾಲೇಜಿನ ಭದ್ರ ಕೊಠಡಿಯಿಂದ ಸಂಬಂಧಿತ ಮತಗಟ್ಟೆಯ ಕರ್ತವ್ಯದಲ್ಲಿರುವ ಸಿಬಂದಿಗಳು ಪಡೆದುಕೊಂಡರು. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಅಧಿಕ ಮತಯಂತ್ರಗಳನ್ನು ನೀಡಲಾಗಿದೆ. ಅಗತ್ಯ ಬಂದಲ್ಲಿ ಇವುಗಳನ್ನು ಬಳಸಲಾಗುವುದು. ಚುನಾವಣಾ ಸಾಮಾಗ್ರಿಗಳನ್ನು ಕೊಂಡೊಯ್ಯಲು ಹಾಗೂ ಅಧಿಕಾರಿಗಳ ಸಹಿತ ಸಿಬ್ಬಂದಿಗಳನ್ನು ಆಯಾಯ ಮತಗಟ್ಟೆಗಳಿಗೆ ತಲುಪಿಸಲು ಬಸ್ ಮೊದಲಾದ ವಾಹನಗಳನ್ನು ಬಳಸಲಾಗಿದೆ.
      ಕಣದಲ್ಲಿರುವ ಅಭ್ಯರ್ಥಿಗಳು : ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರವೀಶ ತಂತ್ರಿ ಕುಂಟಾರು, ಸಿಪಿಎಂನ ಕೆ.ಪಿ.ಸತೀಶ್ಚಂದ್ರನ್, ಕಾಂಗ್ರೆಸ್‍ನ ರಾಜ್‍ಮೋಹನ್ ಉಣ್ಣಿತ್ತಾನ್, ಬಿಎಸ್‍ಪಿಯ ನ್ಯಾಯವಾದಿ ಬಶೀರ್ ಆಲಡಿ, ಸ್ವತಂತ್ರ ಅಭ್ಯರ್ಥಿಗಳಾಗಿ ಗೋವಿಂದನ್ ಬಿ.ಆಲಿನ್‍ತಾಳೆ, ಕೆ.ನರೇಂದ್ರನ್, ಆರ್.ಕೆ.ರಣದಿವಾನ್, ರವೀಶ್ ಬಂದಡ್ಕ, ಸಜಿ ಸ್ಪರ್ಧಾ ಕಣದಲ್ಲಿದ್ದಾರೆ.
     (ಸಮರಸ ಚಿತ್ರ ಮಾಹಿತಿ: ಚುನಾವಣಾ ಸಾಮಗ್ರಿಗಳನ್ನು ಸಿಬ್ಬಂದಿಗಳು ಕೊಂಡೊಯ್ಯುತ್ತಿರುವುದು ಮತ್ತು ವಾಹನಗಳು.)



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries