ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಪೆÇೀಲ್ ಮೆನೇಜರ್ ಆ್ಯಪ್ ಪೂರಕವಾಗಿದೆ.
ಮತದಾನ ಸಂಬಂಧ ಸಮಗ್ರ ಮಾಹಿತಿ ಮತಗಟ್ಟೆ ಸಿಬ್ಬಂದಿಗೆ ಸೂಕ್ತ ಅವ„ಯಲ್ಲಿ ಲಭಿಸುವಂತೆ ಮಾಡುವ ಉದ್ದೇಶದಿಂದ ಈ ಆ್ಯಪ್ ಸಿದ್ಧಪಡಿಸಲಾಗಿದೆ. ನ್ಯಾಷನಲ್ ಇನ್ ಫಾರ್ಮೆಟಿಕ್ ಸೆಂಟರ್ ಪ್ರಕಟಿಸಿರುವ ಈ ಮೊಬೈಲ್ ಆ್ಯಪ್‍ಗೆ ಪ್ರಧಾನ ಚುನಾವಣೆ ಅಧಿಕಾರಿ ಮಂಜೂರಾತಿ ನೀಡಿದ್ದಾರೆ.
ಪೆÇೀಲ್ ಮೆನೇಜರ್ ಆ್ಯಪ್ ನಿಯಂತ್ರಣ ನಿಟ್ಟಿನಲ್ಲಿ ರಿಟನಿರ್ಂಗ್ ಆಫೀಸರ್, ಸಹಾಯಕ ರಿಟರ್ನಿಂಗ್ ಆಫೀಸರ್ ಮೊದಲಾದ ಸಿಬ್ಬಂದಿ ಸೇರಿರುವ ವೆಬ್ ಪೆÇೀರ್ಟಲ್ ಒಂದು ಜಾರಿಯಲ್ಲಿದೆ. ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿದ ನಂತರ ಮೊಬೈಲ್ ನಂಬ್ರ, ಒ.ಪಿ.ಟಿ. ಬಳಸಿ ನೋಂದಣಿ ನಡೆಸಿದ ನಂತರ ಆ್ಯಪ್ ಬಳಸಬಹುದಾಗಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಅವರ ದೂರವಾಣಿ ಸಂಖ್ಯೆ ಸ್ಪಷ್ಟವಾಗಿ ಅಪ್ ಲೋಡ್ ನಡೆಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.
ಮತದಾನ ಸೂಕ್ತ ರೀತಿ ನಡೆಯುತ್ತಿದೆಯೇ ಎಂದು ಖಚಿತಪಡಿಸುವಲ್ಲೂ ಈ ಆ್ಯಪ್ ಪೂರಕವಾಗಿದೆ. ಮತಗಟ್ಟೆ ಸಿಬ್ಬಂದಿ ಮತಗಟ್ಟೆಗೆ ಹೊರಟಿದ್ದಾರೋ, ಇಲ್ಲವೋ ಎಂದೂ, ಹೊರಟಿದ್ದರೆ ಅವರು ಎಲ್ಲಿವರೆಗೆ ತಲಪಿದ್ದಾರೆ ಎಂದೂ, ಪ್ರಹಸನ ಮತದಾನ (ಮೋಕ್ ಪೆÇೀಲ್) ಶುರು ಮಾಡಿದ್ದಾರೋ, ಇಲ್ಲವೋ ಎಂದೂ, ಇತ್ಯಾದಿ ವಿಚಾರಗಳನ್ನು ಈ ಆ್ಯಪ್ ಮೂಲಕ ತಿಳಿಯಬಹುದಾಗಿದೆ.
ಸಾಲಿನಲ್ಲಿ ನಿಂತಿರುವ ಮತದಾತರ ಸಂಖ್ಯೆ, ಪ್ರತಿ ತಾಸಿಗೊಮ್ಮೆ ಮತದಾನದ ಪ್ರಮಾಣ, ಕೊನೆಯ ಮತದಾನ, ಮತದಾನ ಕೊನೆಗೊಳಿಸಲಾಗಿದೆಯೇ, ಇಲ್ಲವೋ ಎಂದೂ, ಮತಗಟ್ಟೆ ಸಿಬ್ಬಂದಿ ಸುರಕ್ಷಿತರಾಗಿ ಮತಗಟ್ಟೆಗೆ ತಲಪಿದ್ದಾರೋ, ಇಲ್ಲವೋ ಎಂದೂ, ಇತ್ಯಾದಿ ವಿಚಾರಗಳನ್ನು ಈ ಆ್ಯಪ್ ಮೂಲಕ ತಿಳಿಯಬಹುದಾಗಿದೆ.
ಚುನಾವನೆ ವೇಳೆ ಅನಿರೀಕ್ಷಿತ ಘಟನೆಗಳು (ಕಾನೂನು ಬಾಹಿರ ಕೃತ್ಯಗಳು, ಮತದಾನಕ್ಕೆ ತಡೆಯುಂಟು ಮಾಡುವುದು ಇತ್ಯಾದಿ), ಇ.ವಿ.ಎಂ. ಕೆಟ್ಟು ಹೋಗುವಿಕೆ ಇತ್ಯಾದಿ ನಡೆದರೆ ಸಂಬಂಧಪಟ್ಟ ಅ„ಕಾರಿಗಳನ್ನು ಎಚ್ಚರಿಸುವ ಸೌಲಭ್ಯ ಪೆÇೀಲ್ ಮೆನೇಜರ್ ಆ್ಯಪ್‍ನಲ್ಲಿದೆ.
ಈ ಮೊಬೈಲ್ ಆ್ಯಪ್ ಬಳಕೆ ಸಂಬಂಧ ಆಯಾ ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಯಾವುದೋ ಕಾರಣದಿಂದ ಆ್ಯಪ್ ಬಳಸಲು ಸಾ`À್ಯವಾಗದೇ ಇದ್ದಲ್ಲಿ ಆಯಾ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸೆಕ್ಟರ್ ಅಧಿಕಾರಿಗಳು ಈ ಮಾಹಿತಿಯನ್ನು ಆ್ಯಪ್‍ನಲ್ಲಿ ಅಪ್ ಲೋಡ್ ನಡೆಸುವರು. ಈ ಮೂಲಕ ತಮ್ಮ ವ್ಯಾಪ್ತಿಯ ಮತಗಟ್ಟೆಗಳ ಮಾಹಿತಿ ಸಂಬಂಧಪಟ್ಟ ಸಿಬ್ಬಂದಿಗೆ ಲಭಿಸಲಿದೆ.