ಮುಳ್ಳೇರಿಯ : ಸರಕಾರಿ ಹಿರಿಯ ಪ್ರೌಢಶಾಲೆ ಮುಳ್ಳೇರಿಯಾದಲ್ಲಿ ಈ ವರ್ಷ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಈ ಪೈಕಿ 8 ಮಂದಿಗೆ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಫಲಿತಾಂಶ ಬಂದಿರುತ್ತದೆ.
ಕನ್ನಡ ಮಾಧ್ಯಮದ ಪ್ರಖ್ಯಾತ್ ಡಿ ಶೆಟ್ಟಿ, ಪ್ರತೀಕ್ ರಾವ್, ಸಾರ್ಥಕ್ ರಾಜ್, ಅಭಿರಾಮ್ ಭಟ್, ಸ್ನೇಹಾ ಎಂ.ವಿ., ಸುಪ್ರೀತಾ, ಜ್ಯೋತಿ ಎ., ದೀಕ್ಷಿತ್ ಸಿ.ಎಚ್. ಇವರಿಗೆ ಎ ಪ್ಲಸ್ ಗ್ರೇಡ್ ಲಭಿಸಿದೆ.
ಕನ್ನಡ ಮತ್ತು ಮಲೆಯಾಳ ಮಾಧ್ಯಮ ಸೇರಿ ಶಾಲೆಯ ಒಟ್ಟು ಫಲಿತಾಂಶ ಶೇ.98.52 ಆಗಿದ್ದು, ಮಲೆಯಾಳ ಮಾಧ್ಯಮದಲ್ಲಿ ನೌಶಿದಾ ಬಿ ಮತ್ತು ಸುರೇಶ್ ಇವರೀರ್ವರಿಗೆ ಸಂಪೂರ್ಣ ಎ ಪ್ಲಸ್ ಲಭಿಸಿರುತ್ತದೆ. ಆಯಿಷತ್ ಜಶೀಲಾ, ನಾಫೀಯಾ ರಹಮತ್, ಅಭಿಜಿತ್, ಪ್ರಾರ್ಥನಾ ಎಂಬವರಿಗೆ 9 ವಿಷಯಗಳಲ್ಲಿ ಎಪ್ಲಸ್ ಗ್ರೇಡ್ ಲಭಿಸಿದೆ.
ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಅಧ್ಯಾಪಕರು, ನೌಕರ ವೃಂದದವರು, ರಕ್ಷಕ-ಶಿಕ್ಷಕ ಸಂಘ, ಹಳೆವಿದ್ಯಾರ್ಥಿ ಸಂಘ ಹಾಗೂ ಊರವರು ಅಭಿನಂದಿಸಿದ್ದಾರೆ.