ಕಾಸರಗೋಡು: ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆ ಸತತ ಏಳನೇ ಬಾರಿಯೂ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ. ಇದೇ ಶಾಲೆಯ ಪಿಯೂಷ್ ಕೆ.ಬಿ, ಅಂಜಲಿ ಚಂದ್ರ, ಶ್ರೀಷ್ಮ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗ್ರೇಡ್ ಹಾಗು ಐದು ಮಕ್ಕಳು 9 ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಹಾಗು ಒಂದು ವಿಷಯದಲ್ಲಿ ಎ ಗ್ರೇಡ್ ಪಡೆದಿರುತ್ತಾರೆ. ಎ ಪ್ಲಸ್ ಗ್ರೇಡ್ ಪಡೆದ ಮೂರೂ ಮಂದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಪುರಸ್ಕಾರ ಪಡೆದಿರುವ ವಿದ್ಯಾರ್ಥಿಗಳಾಗಿದ್ದು, ಕರ್ನಾಟಕದ ಬೆಳಗಾವಿಯಲ್ಲಿ ಜರಗಿದ ರಾಷ್ಟ್ರ ಮಟ್ಟದ ಸಾಂಸ್ಕøತಿಕ ವಿನಿಮಯ ಶಿಬಿರದಲ್ಲೂ ಭಾಗವಹಿಸಿದ್ದಾರೆ. ನೂರು ಶೇಕಡಾ ಫಲಿತಾಂಶ ದಾಖಲಿಸಿದ ಎಲ್ಲರನ್ನೂ ಶಾಲಾ ರಕ್ಷಕ ಶಿಕ್ಷಕ ಸಂಘ, ಮಾತೃಸಂಘ, ಶಾಲಾ ವ್ಯವಸ್ಥಾಪಕರು, ಅಧ್ಯಾಪಕ-ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.
ಎಸ್ ಎಸ್ ಎಲ್ ಸಿ ಫಲಿತಾಂಶ- ಕೂಡ್ಲು ಶಾಲೆ ಸತತ ಏಳನೇ ಬಾರಿ 100 ಶೇಕಡಾ ಫಲಿತಾಂಶ
0
ಮೇ 06, 2019