ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠವು ಈ ಬಾರಿಯೂ ಶೇ.100 ಫಲಿತಾಂಶವನ್ನು ಗಳಿಸಿಕೊಂಡಿದೆ. ಸೋಮವಾರ ಕೇರಳ ರಾಜ್ಯ ವಿದ್ಯಾಭ್ಯಾಸ ಇಲಾಖೆಯು 2018-19ನೇ ಸಾಲಿನ ಎಸ್.ಎಸ್.ಎಲ್.ಸಿ.ಫಲಿತಾಂಶವನ್ನು ಪ್ರಕಟಗೊಳಿಸಿತ್ತು. ಒಟ್ಟು 19ಮಂದಿ ವಿದ್ಯಾರ್ಥಿಗಳಲ್ಲಿ 5ಮಂದಿ ಎಲ್ಲ ವಿಷಯದಲ್ಲಿಯೂ ಎ ಪ್ಲಸ್ ಪಡೆದರು. ವಿದ್ಯಾರ್ಥಿಗಳಾದ ಅಭಿರಾಮ ಕಾಶ್ಯಪ್ ಕೆ.ವಿ., ಗಾಮಿನಿ, ಶಮಾತ್ಮಿಕಾ ಎ., ಶ್ರೀರತ್ನಮಾಲಾ ಎಸ್.ವಿ. ಹಾಗೂ ಸ್ನೇಹಶ್ರೀ ಪಿ. ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದುಕೊಂಡರು. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ ಅಭಿನಂದನೆಯನ್ನು ಸಲ್ಲಿಸಿದೆ.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಶೇ. 100 ಫಲಿತಾಂಶ
0
ಮೇ 07, 2019