ಬದಿಯಡ್ಕ: 2019 ಮಾರ್ಚ್‍ನಲ್ಲಿ ನಡೆದ ಕೇರಳ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಬೇಳ ಸೈಂಟ್ ಮೇರೀಸ್ ಶಾಲೆಗೆ ಸತತವಾಗಿ ಶೇ. 100 ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ 63 ವಿದ್ಯಾರ್ಥಿಗಳಲ್ಲಿ 8 ಮಂದಿಗೆ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಮತ್ತು 8 ಮಂದಿಗೆ ಬಿ ಪ್ಲಸ್ ಲಭಿಸಿರುತ್ತದೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಶಾಲಾ ಪ್ರಬಂಧಕ ಅತೀ ವಂ. ಸ್ವಾಮಿ. ಜೋನ್ ವಾಸ್, ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ಜೀನಾ ಕಲ್ಲರಕ್ಕಲ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯಕುಮಾರ್ ಮತ್ತು ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
ಬೇಳ ಶಾಲೆಗೆ ಶೇ.100 ಫಲಿತಾಂಶ
0
ಮೇ 07, 2019