ಶಿಮ್ಲಾ: ಭಾರತದ ಮೊದಲ ಮತದಾರ ಎಂಬ ಖ್ಯಾತಿಗೆ ಪಾತ್ರರಾಗಿರುವ ಹಿಮಾಚಲ ಪ್ರದೇಶದ 102 ರ ಹರೆಯದ ಅಜ್ಜ ಶ್ಯಾಮ್ ಸರನ್ ನೇಗಿ ಅವರು ಭಾನುವಾರ ತಮ್ಮ ಹಕ್ಕು ಚಲಾಯಸಿದ್ದಾರೆ.
ಖುಷಿಯಿಂದ ಮಾಂಡಿಯ ಕಲ್ಪಾ ಮತಗಟ್ಟೆಗೆ ಆಗಮಿಸಿದ ನೇಗಿ ಅವರು ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡ ಸಂಭ್ರಮದಲ್ಲಿ ಮನೆಗೆ ಮರಳಿದರು. ನೇಗಿ ಅವರು ಬುಡಕಟ್ಟು ಜಿಲ್ಲೆಯಾಗಿರುವ ಕಿನೌಲಿರ್ ನಿವಾಸಿ. 1917 ಜುಲೈ 1 ರಂದು ಜನಿಸಿದ್ದ ಇವರು 1952 ರ ಫೆಬ್ರವರಿ ನಡೆದ ಮೊದಲ ಚುನಾವಣೆಯಲ್ಲಿ ಮತದಾನ ಮಾಡಿದ್ದರು.ಅಂದು
ಶಿಕ್ಷಕರಾಗಿದ್ದ ನೇಗಿ ಅವರು ಚುನಾವಣಾ ಕರ್ತವ್ಯಕ್ಕೆ ತೆರಳಬೇಕಾಗಿತ್ತು, ಹೀಗಾಗಿ ಅವರು ಬೆಳಿಗ್ಗೆ 7 ಗಂಟೆಗೆ ತೆರಳಿ ಹಕ್ಕು ಚಲಾಯಿಸಿದ್ದರು.