ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮೇ 5 ರಂದು ಮಧ್ಯಾಹ್ನ 12 ಗಂಟೆಗೆ ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 105 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಪಿ.ಎನ್.ಮೂಡಿತ್ತಾಯ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮ - ವಿಕಾಸ ಎಂಬ ಕುರಿತು ಉಪನ್ಯಾಸ ನೀಡುವರು. ಯುವ ಬರಹಗಾರ ಶ್ರೀಶ ಅವರು ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಕಾರ್ಯವೈಖರಿ ಎಂಬ ಬಗ್ಗೆ ಮಾತನಾಡಲಿರುವರು.
ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ ಶುಭಹಾರೈಸುವರು. ಕ.ಸಾ.ಪ. ಕೇರಳ ಘಟಕ ಗೌರವ ಕಾರ್ಯದರ್ಶಿಗಳಾದ ರಾಮಚಂದ್ರ ಭಟ್ ಪಿ.ಧರ್ಮತ್ತಡ್ಕ, ನವೀನ್‍ಚಂದ್ರ ಎಂ.ಎಸ್. ಮತ್ತು ಸುಬ್ಬಣ್ಣ ಶೆಟ್ಟಿ ಕೆ. ಮೊದಲಾದವರು ಉಪಸ್ಥಿತರಿರುವರು.