ನವದೆಹಲಿ: ಕಾರ್ಯಕ್ಷಮತೆ ಪ್ರದರ್ಶಿಸದ 1,200 ಐಪಿಎಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದ್ದು, ಗೃಹ ಸಚಿವಾಲಯ ಇಂತಹ ಅಧಿಕಾರಗಳ ಮೇಲೆ ಕಣ್ಣಿಟ್ಟಿದೆ.
ಕಳೆದ 3 ವರ್ಷಗಳಲ್ಲಿ 1,181 ಐಪಿಎಸ್ ಅಧಿಕಾರಿಗಳ ಸೇವಾ ದಾಖಲೆಗಳನ್ನು ಪುನಃಪರಿಶೀಲನೆ ನಡೆಸಿರುವ ಗೃಹ ಸಚಿವಾಲಯ, ಪರಿಶೀಲನೆ ಸತತವಾಗಿ ನಡೆಯಲಿದ್ದು, ಅಧಿಕಾರಿಗಳ ಪಟ್ಟಿ ಇನ್ನೂ ಬೆಳೆಯುವ ಸಾಧ್ಯತೆ ಇದೆ ಎಂದು ಹೇಳಿದೆ.
ಕಾರ್ಯಕ್ಷಮತೆ ಪ್ರದರ್ಶಿಸದ ಅಧಿಕಾರಿಗಳ ಮೇಲೆ ನಿಗಾವಹಿಸುವುದಕ್ಕೆ ಅನುಮತಿ ನೀಡಿರುವ ಕಾನೂನಿನ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದ್ದು, ಅಂತಹ ಅಧಿಕಾರಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕನಿಷ್ಟ 3 ತಿಂಗಳು ಮುಂಚಿತವಾಗಿ ನೊಟೀಸ್ ಜಾರಿ ಮಾಡಿ ನಿವೃತ್ತಿ ಪಡೆಯುವಂತೆ ಸೂಚನೆ ನೀಡಲಾಗುತ್ತದೆ.