ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ವರ್ಕಾಡಿ ಶಾಖೆಯ ವಾರ್ಷಿಕ ಮಹಾಸಭೆ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮೇ 12 ರಂದು ದೈಗೋಳಿ ಸಂಘದ ಕಚೇರಿಯಲ್ಲಿ ಜರಗಲಿದೆ.
ಬೆಳಿಗ್ಗೆ 9 ರಿಂದ ಸತ್ಯನಾರಾಯಣ ಪೂಜೆ, 11 ಕ್ಕೆ ಮಹಾಮಂಗಳಾರತಿ, ಬಳಿಕ ವಾರ್ಷಿಕ ಮಹಾಸಭೆ, ಪ್ರಸಾದ ವಿತರಣೆ, ಅಪರಾಹ್ನ ನಂತರ ಸಾಂಸ್ಕøತಿಕ ಕಾರ್ಯಕ್ರಮ ನೃತ್ಯ ವೈವಿಧ್ಯ ಜರಗಲಿದೆ. ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷತೆಯನ್ನು ವರ್ಕಾಡಿ ಕುಲಾಲ ಸಂಘದ ಅಧ್ಯಕ್ಷ ನಾರಾಯಣ ಸಾಲಿಯಾನ್ ನೂಜಿ ವಹಿಸಲಿದ್ದು, ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಶುಭಹಾರೈಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕ ಯು.ಎಂ.ಮೂಲ್ಯ ಭಾಗವಹಿಸುವರು. ಜಿಲ್ಲಾ ಕುಲಾಲ ಸಂಘ ಪ್ರಧಾನ ಕಾರ್ಯದರ್ಶಿ ಸತೀಶ್ ಮಡ್ವ, ಮಹಿಳಾ ಘಟಕ ಅಧ್ಯಕ್ಷೆ ಗಿರಿಜಾ ಎಸ್.ಬಂಗೇರ, ಕುಲಾಲ ಮಹಿಳಾ ಘಟಕ ವರ್ಕಾಡಿ ಶಾಖೆ ಮಾಜಿ ಅಧ್ಯಕ್ಷೆ ಸರೋಜ ನೂಜಿ ಉಪಸ್ಥಿತರಿರುವರು.