HEALTH TIPS

14ರಂದು ಪೆರ್ಮುದೆ ಇಗರ್ಜಿಯ ನೂತನ ಕಟ್ಟಡದ ಉದ್ಘಾಟನೆ: 12ರಂದು ಹೊರೆಕಾಣಿಕೆ ಮೆರವಣಿಗೆ

     
    ಕುಂಬಳೆ:  ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ದೇವಾಲಯದ ನೂತನ ಕಟ್ಟಡದ ಉದ್ಘಾಟನೆ ಮೇ 14ರಂದು ವಿವಿಧ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಂಗವಾಗಿ ಮೇ 12ರಂದು ಮಾಣಿತ್ತಡ್ಕದಿಂದ ಪೆರ್ಮುದೆ ಇಗರ್ಜಿಯ ವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
     ಕಾರ್ಯಕ್ರಮದ ಅಂಗವಾಗಿ ಮೇ.14ರಂದು ಬೆಳಿಗ್ಗೆ 9.15ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ.
ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ಇಗರ್ಜಿಯ ಪ್ರವೇಶ ದ್ವಾರದ ಬಳಿ ಸ್ವಾಗತಿಸಲಾಗುವುದು. 9.30 ನೂತನ ಘಂಟಾಗೋಪುರದ ಉದ್ಘಾಟನೆ ಹಾಗೂ ಆಶೀರ್ವಚನ, 9.45ಕ್ಕೆ ನೂತನ ದೇವಾಲಯ ಕಟ್ಟಡದ ಉದ್ಘಾಟನೆ ಹಾಗೂ ಆಶೀರ್ವಚನ ನಡೆಯಲಿದೆ. ಬಳಿಕ ನೂತನ ಇಗರ್ಜಿಯಲ್ಲಿ ನಡೆಯುವ ಪ್ರಥಮ ದಿವ್ಯಬಲಿಪೂಜೆಯನ್ನು ಧರ್ಮಾಧ್ಯಕ್ಷ ಅತಿ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ನೆರವೇರಿಸುವರು. ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್, ಕಯ್ಯಾರು ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ಫಾ. ವಿಕ್ಟರ್ ಡಿಸೋಜ, ಡೊಮಿನಿಕನ್ ಪ್ರೊವಿನ್ಶಿಯಲ್ ವಂದನೀಯ ಫಾ. ನವೀನ್ ಸಲ್ಡಾನ್ಹಾ, ಕಾಸರಗೋಡು ವಲಯದ ಧರ್ಮಗುರು ಫಾ. ಜೋನ್ ವಾಸ್, ಕಾಸರಗೋಡು ವಲಯದ ವಿವಿಧ ಇಗರ್ಜಿಗಳ ಧರ್ಮಗುರುಗಳು, ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಸೇವೆಸಲ್ಲಿಸಿದ ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಧರ್ಮಭಗಿನಿಯರು, ಕ್ರೈಸ್ತ ಬಾಂಧವರು ಮತ್ತಿತರರು ಭಾಗವಹಿಸುವರು.
       11.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ ದಿವ್ಯ ಸಂದೇಶ ನೀಡುವರು. ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸುವರು. ನೂತನ ಇಗರ್ಜಿಯ ಉದ್ಘಾಟನಾ ಸಮಾರಂಭದ ಅಂಗವಾಗಿ ಹೊರತರುವ `ಪೆರ್ಮುದೆಚೊ ಪರ್ಜಳ್' ಸ್ಮರಣ ಸಂಚಿಕೆಯನ್ನು ಧರ್ಮಾಧ್ಯಕ್ಷರು ಬಿಡುಗಡೆಗೊಳಿಸುವರು. ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಅತಿ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ, ಡೊಮಿನಿಕನ್ ಪ್ರೊವಿನ್ಶಿಯಲ್ ವಂದನೀಯ ಫಾ. ನವೀನ್ ಸಲ್ಡಾನ್ಹಾ, ನೂತನ ಇಗರ್ಜಿಯ ಕಟ್ಟಡದ ಯೋಜನೆಗೆ ಚಾಲನೆ ನೀಡಿದ ಕಯ್ಯಾರು ಇಗರ್ಜಿಯ ಧರ್ಮಗುರು ಫಾ. ವಿಕ್ಟರ್ ಡಿಸೋಜ, ನೂತನ ಇಗರ್ಜಿ ಕಟ್ಟಡದ ಎಂಜಿನಿಯರ್ ಪಾವ್ಲ್‍ಸನ್ ಕೊರೆಯ ಎರ್ನಾಕುಳಂ, ಇಗರ್ಜಿಯ ವಿವಿಧ ಕಾರ್ಯಚಟುವಟಿಕೆಗಳಿಗೆ ನೆರವಾದ ನವೀನ್ ರಂಜಿತ್ ಡಿಸೋಜ ಅವರನ್ನು ಸನ್ಮಾನಿಸಲಾಗುವುದು. ಇಗರ್ಜಿಯ ಕ್ರೈಸ್ತಬಾಂಧವರ ಪರವಾಗಿ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಗುವುದು. ಕಾಸರಗೋಡು ವಲಯದ ಧರ್ಮಗುರು ಫಾ. ಜೋನ್ ವಾಸ್, ಪುತ್ತಿಗೆ ಪಂಚಾಯಿತಿ ಅಧ್ಯಕ್ಷೆ ಅರುಣ ಜೆ., ಪೈವಳಿಕೆ ಪಂಚಾಯಿತಿ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಮಾತನಾಡುವರು. ಇಗರ್ಜಿಯ ಪಾಲನಾ ಸಮಿತಿ ಕಾರ್ಯದರ್ಶಿ ಜೋನ್ ಡಿಸೋಜ ಓಡಂಗಲ್ಲು ವರದಿ ಮಂಡಿಸುವರು. ಕಯ್ಯಾರು ವಿಜಯ ಜೇಸುರಾಜ ಕಾನ್ವೆಂಟಿನ ಸುಪೀರಿಯರ್ ಸಿ. ಮೊಂತಿನ್ ಗೋಮ್ಸ್, ಪುತ್ತಿಗೆ ಪಂಚಾಯಿತಿ ಸದಸ್ಯೆ ಶಾಂತಿ ಡಿಸೋಜ, ಪೈವಳಿಕೆ ಪಂಚಾಯಿತಿ ಸದಸ್ಯರಾದ ಎಂ. ಕೆ. ಅಮೀರ್ ಪೆರ್ಮುದೆ, ಹರೀಶ್ ಬೊಟ್ಟಾರಿ, ಕಯ್ಯಾರು ಕ್ರಿಸ್ತರಾಜ ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿಸೋಜ, ಕಾರ್ಯದರ್ಶಿ ರೋಶನ್ ಡಿಸೋಜ ಉಪಸ್ಥಿತರಿರುವರು. ಪೆರ್ಮುದೆ ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡೆನಿಸ್ ಡಿಸೋಜ ಪುರುಷಮಜಲು ವಂದಿಸುವರು. ಇಗರ್ಜಿಯ ನೂತನ ಕಟ್ಟಡದ ಗುತ್ತಿಗೆದಾರರು, ವಸ್ತು ರೂಪದಲ್ಲಿ ಹಾಗೂ ಧನ ರೂಪದಲ್ಲಿ ಸಹಾಯ ನೀಡಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
        ಸಂಜೆ 6.30ಕ್ಕೆ ನಡೆಯಲಿರುವ ಸಾಂಸ್ಕøತಿಕ ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸುವರು. ಕಯ್ಯಾರು ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ಫಾ. ವಿಕ್ಟರ್ ಡಿಸೋಜ, ಪೈವಳಿಕೆ ಪಂಚಾಯಿತಿ ಉಪಾಧ್ಯಕ್ಷೆ ಸುನಿತ ವಲ್ಟಿ ಡಿಸೋಜ, ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಕುಡಾಲುಮೇರ್ಕಳ ಎಎಲ್‍ಪಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಅಬ್ದುಲ್ ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡೆನಿಸ್ ಡಿಸೋಜ ಪುರುಷಮಜಲು, ಕಾರ್ಯದರ್ಶಿ ಜೋನ್ ಡಿಸೋಜ ಓಡಂಗಲ್ಲು ಉಪಸ್ಥಿತರಿರುವರು. ಇಗರ್ಜಿಯ ಹಾಗೂ ಪರಿಸರದ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಲಿದೆ. ಬಳಿಕ ಮಂಜೇಶ್ವರ ಶಾರದಾ ಆಟ್ರ್ಸ್ ಕಲಾವಿದರಿಂದ `ಬಂಜಿಗ್ ಹಾಕೊಡ್ಚಿ' ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
    ಮೇ 12ರಂದು ಮಾಣಿತ್ತಡ್ಕದಿಂದ ಪೆರ್ಮುದೆ ಇಗರ್ಜಿ ಪರಿಸರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಕಾಸರಗೋಡು ಧರ್ಮವಲಯದ ವಿವಿಧ ಇಗರ್ಜಿಗಳ ಕ್ರೈಸ್ತ ಬಾಂಧವರು, ಪರಿಸರದ ಸಂಘ-ಸಂಸ್ಥೆಗಳು, ಪೆರ್ಮುದೆ ಇಗರ್ಜಿಯ ಕ್ರೈಸ್ತ ಬಾಂಧವರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸುವರು. ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್, ಕಯ್ಯಾರು ಇಗರ್ಜಿಯ ಧರ್ಮಗುರು ಫಾ. ವಿಕ್ಟರ್ ಡಿಸೋಜ, ಧರ್ಮಭಗಿನಿಯರು ಮತ್ತಿತರರು ಉಪಸ್ಥಿತರಿರುವರು. ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡೆನಿಸ್ ಡಿಸೋಜ, ಕಾರ್ಯದರ್ಶಿ ಜೋನ್ ಡಿಸೋಜ ಓಡಂಗಲ್ಲು, ಗುರಿಕ್ಕಾರರಾದ ವಿನ್ಸೆಂಟ್ ಮೊಂತೆರೊ ಪೆರಿಯಡ್ಕ, ಜೋಸೆಫ್ ಕ್ರಾಸ್ತ ಪುಟ್ಟಮಾಣಿ, ಫಾನ್ಸಿಸ್ ಸಂತೋಷ್ ಡಿಸೋಜ ಮತ್ತಿತರರು ಉಪಸ್ಥಿತರಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries