HEALTH TIPS

ಸಮಗ್ರ ಶಿಕ್ಷಾ ಕೇರಳ ಯೋಜನೆ: 1400 ಕೋಟಿ ಮೀಸಲು

     ಬದಿಯಡ್ಕ: ರಾಜ್ಯ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಾ ಅಭಿಯಾನ್ (ಎಸ್‍ಎಸ್‍ಎ) ಹಾಗೂ ಕೇಂದ್ರ ಸರಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ್ (ಆರ್‍ಎಂಎಸ್‍ಎ) ಜೊತೆ ಸಂಯೋಜಿಸಿಕೊಂಡು ಸಮಗ್ರ ಶಿಕ್ಷಾ ಕೇರಳ ನೂತನ ಆಶಯವನ್ನು ಮುಂದಿಟ್ಟಿದೆ.
     ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಮಗ್ರ ಶಿಕ್ಷಾ ಕೇರಳ ಯೋಜನೆಗಾಗಿ 1400 ಕೋಟಿ ರೂ.ನ ಕರಡು ವಾರ್ಷಿಕ ಯೋಜನೆಗಾಗಿ ಮೀಸಲಿಡಲಾಗಿದೆ. ಆದರೆ ಈ ಯೋಜನೆಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಖಾತೆಯ ಅಂಗೀಕಾರ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಎಂಎಚ್‍ಆರ್‍ಡಿ ಸಭೆಯಲ್ಲಿ ಯೋಜನೆಯ ಸಮಗ್ರ ಮಾಹಿತಿಯನ್ನು ಸಲ್ಲಿಸಿ ಅಂಗೀಕಾರ ಪಡೆಯಬೇಕಾಗಿದೆ.
   ಕಿರಿಯ ಪ್ರಾಥಮಿಕ ಮಟ್ಟದಲ್ಲಿ ನಡೆಸಿ ಯಶಸ್ವಿಗೊಂಡ ಕಲಿಯುವಿಕೆಯ ಪೋಷಣೆ ಯೋಜನೆಯನ್ನು ಹೈಯರ್ ಸೆಕೆಂಡರಿ ಮಟ್ಟಕ್ಕೆ ವಿಸ್ತರಿಸುವುದೇ ಸಮಗ್ರ ಶಿಕ್ಷಾ ಕೇರಳದ ಆಶಯವಾಗಿದೆ. ಕಳೆದ ವರ್ಷ 739 ಕೋಟಿ ರೂ. ಎಸ್‍ಎಸ್‍ಎ ಹಾಗೂ ಆರ್‍ಎಂಎಸ್‍ಎಗೆ ಕೇಂದ್ರದಿಂದ ಲಭಿಸಿದೆ. ಈ ಬಾರಿ ಅದಕ್ಕಿಂತ ಹೆಚ್ಚು ಮೊತ್ತ ಲಭಿಸುವ ನಿರೀಕ್ಷೆ ಹೊಂದಿದೆ. ಈ ಮೊತ್ತವನ್ನು ಸೇರಿಸಿಕೊಂಡು ಸಮಗ್ರ ಶಿಕ್ಷಾ ಕೇರಳ ಯೋಜನೆಯನ್ನು ಜಾರಿಗೊಳಿಸಲಾಗುವುದು.
    ಯೋಜನೆಯಂತೆ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಅಕಾಡೆಮಿ ಸಂಬಂಧಿತ ಚಟುವಟಿಕೆಗಳಿಗೆ ನಿಧಿಯನ್ನು ವಿನಿಯೋಗಿಸಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕೇರಳದ ಸಾರ್ವಜನಿಕ ಶಿಕ್ಷಣ ವಲಯದಲ್ಲಿ ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಸರ್ವೆ ನಡೆಸಿದ್ದರಲ್ಲಿ ಪತ್ತೆಯಾದ ನ್ಯೂನತೆಗಳನ್ನು ಪರಿಹರಿಸುವುದಕ್ಕಾಗಿ ಯೋಜನೆಗಳನ್ನು ಪರಿಷ್ಕೃತಗೊಳಿಸಲಾಗಿದೆ.
     ಕೇರಳದಲ್ಲಿ ಮಲೆಯಾಳ ಭಾಷೆಯನ್ನು ಪೋಷಿಸುವುದಕ್ಕಾಗಿ ಆವಿಷ್ಕರಿಸಿದಂತಹ 'ಮಲೆಯಾಳ ತಿಳಕಂ' ಎಂಬ ಯೋಜನೆಗಳು ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಯಶಸ್ಸು ಕಂಡಿತ್ತು. ಇದನ್ನು ಈ ಬಾರಿ ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲಾಗುವುದು. ಇದಕ್ಕೂ ನೂತನ ಯೋಜನೆಯ ಮೂಲಕ ನಿಧಿ ಮಂಜೂರುಗೊಳಿಸಲಾಗುವುದು. ಸಾಮಾಜಿಕ ವಿಜ್ಞಾನ ವಿಷಯಕ್ಕೆ ಒತ್ತು ನೀಡುವುದಕ್ಕಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಅಭಿರುಚಿಯನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ವಿಜ್ಞಾನ ಪಥ ಯೋಜನೆಗೆ ಸಮಾನವಾದ ಸಾಮಾಜಿಕ ವಿಜ್ಞಾನ ವಿಷಯದಲ್ಲೂ ಯೋಜನೆಗಳಿವೆ. ಈ ಬಾರಿ ಇದನ್ನು ಹೈಯರ್ ಸೆಕೆಂಡರಿ ತರಗತಿಗಳಲ್ಲೂ ಜಾರಿಗೊಳಿಸುವುದು.
     ಸಾರ್ವಜನಿಕ ಶಿಕ್ಷಣ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನದೊಂದಿಗೆ ಉನ್ನತ ವಿಜ್ಞಾನ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿರುವರ ಸಹಾಯವನ್ನು ಪಡೆಯುವುದೂ ಯೋಜನೆಯ ಪ್ರತ್ಯೇಕತೆಯಾಗಿದೆ. ಹೈಯರ್ ಸೆಕೆಂಡರಿ ಮಟ್ಟದಲ್ಲಿ ವೃತ್ತಿಪರ ಕೋರ್ಸ್‍ಗಳಿಗೆ ಸಮಗ್ರ ಶಿಕ್ಷಾ ಆದ್ಯತೆ ನೀಡಲಾಗುವುದು. 
    ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಇನ್ನಷ್ಟು ಉತ್ತಮ ಪಡಿಸಲು ನೂತನ ಯೋಜನೆ ಸಹಕಾರಿಯಾಗಲಿದೆ. ರಾಷ್ಟ್ರೀಯ ಸಾಧನೆ ಸಮೀಕ್ಷೆ (ನಾಸ್) ಪ್ರಕಾರ ಕೇರಳದ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅದರಿಂದ ಹೊರ ಬರಲು ಸಾಧ್ಯವಾಗುವುದು. ಕೇಂದ್ರೀಯ ಸಂಪನ್ಮೂಲ ಸಚಿವಾಲಯ ಅಂಗೀಕರಿಸಿದ ನೀತಿ ಆಯೋಗ್ ವರದಿಯಲ್ಲಿ ಕೇರಳ ಅತ್ಯುತ್ತಮ ಅಂಕ ಪಡೆದು ಭಾರತದ ಪ್ರಥಮ ರಾಜ್ಯವೆಂದು ಪರಿಗಣಿಸಲಾಗಿದೆ. ಇದನ್ನು  ಮುಂದುವರಿಸುವ ಸಲುವಾಗಿ ಯೋಜನೆಗೆ ಜಾರಿಗೊಳಿಸಲಾಗುವುದು.
     2019-20ನೇ ಶೈಕ್ಷಣಿಕ ಸಾಲಿನಲ್ಲಿ 200 ದಿನಗಳನ್ನು ನಿಖರವಾಗಿ ವಿದ್ಯಾರ್ಥಿಗಳಿಗೆ ಲಭಿಸುವುದಕ್ಕೆ ಕ್ಯಾಲೆಂಡರ್ ರಚಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಏಜೆನ್ಸಿಗಳ ಏಕೀಕರಣ ಹಾಗೂ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಡೆಯುವ ಕಾರ್ಯಾಚರಣೆಯಲ್ಲಿ ಚರ್ಚೆ ನಡೆಸಿ ಯೋಜನೆ ಯಶಸ್ಸಿಗೆ ಪ್ರಯತ್ನಿಸಲಾಗುವುದು ಎಂದು ವಿದ್ಯಾಭ್ಯಾಸ ಇಲಾಖೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries