ಕಾಸರಗೋಡು: ಕೂಡ್ಲು ವಿವೇಕಾನಂದ ನಗರದ ಶ್ರೀ ನಾಗರಾಜ ಗುಳಿಗ ದೈವ ಸನ್ನಿಧಿಯ 10ನೇ ವಾರ್ಷಿಕ ಪ್ರತಿಷ್ಠಾ ದಿನಾಚರಣೆ ಮೇ 15 ಮತ್ತು 16ರಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮೇ 15ರಂದು ಸಂಜೆ 5ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಹಿಂದು ಐಕ್ಯವೇದಿಕೆಯ ರಾಜ್ಯ ಕಾರ್ಯದರ್ಶಿ ಮುರಳೀಧರನ್ ಮಲಪ್ಪುರಂ ಧಾರ್ಮಿಕ ಭಾಷಣ ಮಾಡುವರು. ಬಳಿಕ ರಾತ್ರಿ 7 ಗಂಟೆಗೆ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮಗಳು, 9.30ಕ್ಕೆ ಗಾನಮೇಳ ನಡೆಯುವುದು.
ಮೇ 16ರಂದು ಬೆಳಿಗ್ಗೆ 7ಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರಿಗೆ ಸ್ವಾಗತ, 7.30ರಿಂದ ಭಜನೆ, 8ಕ್ಕೆ ಗಣಪತಿ ಹೋಮ, 9ಕ್ಕೆ ಆಶ್ಲೇಷ ಪೂಜೆ, 11ಕ್ಕೆ ನಾಗತಂಬಿಲ, ಗುಳಿಗ ತಂಬಿಲ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1ರಿಂದ ಅನ್ನದಾನ, ಸಂಜೆ 3ಕ್ಕೆ ಶ್ರೀ ಗುಳಿಗ ದೈವದ ಕೋಲ ಜರಗಲಿದೆ.