ಕಾಸರಗೋಡು: ಕುಂಡಂಗುಳಿ ಜಾಲುಮನೆ ಕೋಟೆ ಬಯಲಿನ ವಾಗ್ಮಾನ್ ದೇವರಮನೆ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮೇ 16 ರಂದು ರಾತ್ರಿ 9.30 ರಿಂದ ತೆಂಕು - ಬಡಗಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ `ಕೀಚಕ-ಮಾಯಾ ತಿಲೋತ್ತಮೆ' ಯಕ್ಷಗಾನ ಬಯಲಾಟ ಜರಗಲಿದೆ.
ಭಾಗವತಿಕೆಯಲ್ಲಿ ಗಾನ ಸುರಭಿ ರವಿಚಂದ್ರ ಕನ್ನಡಿಕಟ್ಟೆ, ಚೆಂಡೆ ಮದ್ದಳೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯ, ಚೈತನ್ಯಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಚಕ್ರತಾಳದಲ್ಲಿ ಲೋಕೇಶ್ ಮುಳಿಯಾರು, ವಿದೂಷಕನಾಗಿ ಜಯರಾಮ ಆಚಾರ್ಯ ಬಂಟ್ವಾಳ, ಸ್ತ್ರೀ ಪಾತ್ರದಲ್ಲಿ ಶಶಿಕಾಂತ ಶೆಟ್ಟಿ ಕಾರ್ಕಳ, ನೀಲ್ಕೋಡು ಶಂಕರ ಹೆಗ್ಡೆ, ರಕ್ಷಿತ್ ಶೆಟ್ಟಿ ಪಡ್ರೆ, ಪುರುಷ ಪಾತ್ರದಲ್ಲಿ ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಮೋಹನ್ ಕುಮಾರ್ ಅಮ್ಮುಂಜೆ, ದಿವಾಕರ ರೈ ಸಂಪಾಜೆ, ಪ್ರಸಾದ್ ಸವಣೂರು, ಸಂತೋಷ್ ಎಡನೀರು ಭಾಗವಹಿಸುವರು.