ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದಲ್ಲಿ ಮೇ 17ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಮಹಿಳೆಯರಿಗೆ ಮಾತ್ರವಿರುವ 55 ಹುದ್ದೆಗಳ ನೇಮಕಾತಿ ಸಂಬಂಧ ಸಂದರ್ಶನ ನಡೆಯಲಿದೆ.
ಶಿಕ್ಷಕಿ, ಫ್ಯಾಕ್ವಲ್ಟಿ,ಕೋರ್ಡಿನೇಟರ್ ಹುದ್ದೆಗಳಿಗಾಗಿ ಸಂದರ್ಶನ ನಡೆಯಲಿದ್ದು, ಪದವೀಧರರಾದ 20ರಿಂದ 40 ವರ್ಷ ಯದವರಿಗೆ ಶಿಕ್ಷಕಿ, ಕೋರ್ಡಿನೇಟರ್, 22ರಿಂದ 40 ವರ್ಷದವರು ಫ್ಯಾಕ್ವಲ್ಟಿ ಹುದ್ದೆಯ ಸಂದರ್ಶನದಲ್ಲಿ ಹಾಜರಾಗಬಹುದು. ಆಸಕ್ತರು ಅರ್ಹತಾಪತ್ರಗಳ ನಕಲು ಸಹಿತ 250 ರೂ. ಶುಲ್ಕ ಪಾವತಿಸಿ ನೋಂದಣಿ ನಡೆಸಿ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 9207155700, 04994-297470 ಸಂಪರ್ಕಿಸಬಹುದು.