ನವದೆಹಲಿ: ಸತತ ಎರಡನೇ ಬಾರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಲಭ್ಯವಾಗಿಲ್ಲ. ಆದರೂ, ನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಾಗಿ ಚಲಾವಣೆಯಾಗಿದ್ದ "ನೋಟಾ" ಮತಗಳು ಕಾಂಗ್ರೆಸ್ ಗೆ ಬಂದಿದ್ದಾದರೆ ಆ ಪಕ್ಷಕ್ಕೆ ಇನ್ನಷ್ಟು ಹೆಚ್ಚು ಸ್ಥಾನ ಗಳಿಸುವ ಸಾಧ್ಯತೆ ಇತ್ತು.
ಫಲಿತಾಂಶಗಳ ಸಮೀಕ್ಷೆಯ ಪ್ರಕಾರ, ನೋಟಾ 65 ಲಕ್ಷ ಮತಗಳನ್ನು ಪಡೆದಿದ್ದು ಬಿಹಾರದಲ್ಲಿ ಗರಿಷ್ಠ 8,17,139 ಮತಗಳು ಲಕ್ಷದ್ವೀಪದಲ್ಲಿ ಕನಿಷ್ಟ 100 ಮತಗಳು ನೋಟಾಗೆ ಚಲಾವಣೆಯಾಗಿದೆ.
21 ಸ್ಥಾನಗಳಲ್ಲಿ, ಗೆಲುವಿನ ಅಂತರವು ನೋಟಾದ ಮತಗಳಿಗಿಂತ ಕಡಿಮೆ! ಪಶ್ಚಿಮ ಬಂಗಾಳದಲ್ಲಿ ನಾಲ್ಕು ಸ್ಥಾನಗಳು, ಆಂಧ್ರಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಮೂರು, ತೆಲಂಗಾಣ ಮತ್ತು ಒಡಿಶಾದಲ್ಲಿ ಎರಡು, ಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಜಾಖರ್ಂಡ್, ಛತ್ತೀಸ್ಗಢ, ಬಿಹಾರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರತಿ ಒಂದು ಸ್ಥಾನದಲ್ಲಿ ಗೆಲುವಿನ ಅಂತರ ನೋಟಾಗಿಂತ ಕಡಿಮೆ ಇದೆ.
ಈ ನಾಲ್ಕು ಕಡೆಗಳಲ್ಲಿ ನೋಟಾ ಬದಲು ಕಾಂಗ್ರೆಸ್ ಗೆ ಮತ ಸಿಕ್ಕಿದ್ದಾದರೆ ಆಗ ಕಾಂಗ್ರೆಸ್ ಗೆ ಇನ್ನಷ್ಟು ಸ್ಥಾನ ಲಭಿಸಬಹುಬಹುದಿತ್ತು.ಛತ್ತೀಸ್ಗಢದ ಕಾಂಕರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರೇಶ್ ಠಾಕೂರ್ 6,914 ಮತಗಳಿಂದ ಬಿಜೆಪಿಯ ಮೋಹನ್ ಮಂಡವಿಗೆ ಸೋಲನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ ನೋಟಾಗೆ 26,692 ಮತ ಬಂದಿದೆ. ಜಾಖರ್ಂಡ್ ನ ಖುಂಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಳಿ ಚರಣ್ ಮುಂಡಾ ಅವರು ಬಿಜೆಪಿ ಅಭ್ಯರ್ಥಿ ಅರ್ಜುನ್ ಮುಂಡಾಗೆ 1,445 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ ಅಲ್ಲಿ ಕೂಡಾ ನೋಟಾಗೆ 21,236 ಮತ ಬಂದಿದೆ. ಕರ್ನಾಟಕದ ಚರಮರಾಜನಗರದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ 1,817 ಮತಗಳ ಅಂತರದಲ್ಲಿ ಸೋತರು. ಕ್ಷೇತ್ರದಲ್ಲಿ 12,706 ಮತಗಳು ನೋಟಾಗೆ ಬಂದಿದೆ. ಝಹೀರಾಬಾದ್ ಕ್ಷೇತ್ರದಲ್ಲಿ, ತೆಲಂಗಾಣ, ಕಾಂಗ್ರೆಸ್ ಮದನ್ ಮೋಹನ್ ರಾವ್ ಟಿಆರ್ ಎಸ್ ಬಿ ಬಿ ಪಾಟೀಲ್ಗೆ 6,229 ಮತಗಳ ಅಂತರದಿಂದ ಸೋತರು. ಅಲ್ಲಿಯೂ ನೋಟಾ ಮತಗಳು 11,138.
ನಿಯಮಗಳ ಪ್ರಕಾರ ಪ್ರತಿಪಕ್ಷ ಸ್ಥಾನಕ್ಕೆ ಯಾವುದೇ ಪಕ್ಷ ಪ್ರತಿಪಕ್ಷ ನಾಯಕ ಸ್ಥಾನ ಪಡೆಯಲು ಸಂಸತ್ತಿನ ಒಟ್ಟಾರೆ ಸ್ಥಾನದ ಶೇ. 10 ಸ್ಥಾನಗಳನ್ನು ಗೆಲ್ಲುವುದು ಅಗತ್ಯ.ಲೋಕಸಭೆಯಲ್ಲಿ 543 ಸದಸ್ಯಬಲವಿದ್ದು 55 ಸ್ಥಾನ ಪಡೆದ ಪಕ್ಷಕ್ಕೆ ಪ್ರತಿಪಕ್ಷ ನಾಯಕ ಸ್ಥಾನ ಲಭಿಸಲಿದೆ.