HEALTH TIPS

ಮೇ 18 : ರಂಗಸಿರಿ ಸಂಭ್ರಮ


        ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ರಂಗಸಿರಿ ಸಂಭ್ರಮ - 2019 ಕಾರ್ಯಕ್ರಮ ನೀರ್ಚಾಲಿನ ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಮೇ 18 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
       ಮಧ್ಯಾಹ್ನ 2 ಗಂಟೆಗೆ ಸಂಸ್ಥೆಯ ಶಾಸ್ತ್ರೀಯ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ನಿರ್ದೇಶನದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 4 ರಿಂದ ಸಾವಿತ್ರಿ ಕೆ.ದೊಡ್ಡಮಾಣಿ ಅವರಿಗೆ ಸಮ್ಮಾನ ನಡೆಯಲಿದೆ. ಸಂಜೆ 4.30 ರಿಂದ ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಡಾ|ಸ್ನೇಹಾ ಪ್ರಕಾಶ್ ಪೆರ್ಮುಖ ಅವರ ನಿರ್ದೇಶನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯುವುದು.
       ರಾತ್ರಿ 7 ರಿಂದ ಶ್ರೀ ಕುಮಾರಸ್ವಾಮಿ ಭಜನಾ ಸಂಘದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 9.30 ರಿಂದ ಸಂಸ್ಥೆಯ ವಿದ್ಯಾರ್ಥಿಗಳಿಂದ ಭೌಮಾಸುರ ಮೋಕ್ಷ-ಶಿವಲೀಲೆ, ಇಂದ್ರಜಿತು ಕಾಳಗ ಯಕ್ಷಗಾನ ಬಯಲಾಟ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries