ಕಾಸರಗೋಡು: ಕಳ್ಳಮತದಾನ ನಡೆದ ಕೇರಳದ ನಾಲ್ಕು ಬೂತ್‍ಗಳಲ್ಲಿ ಮೇ 19 ರಂದು ಮರುಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋೀಗ ನಿರ್ದೇಶ ನೀಡಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಕಲ್ಯಾಶ್ಶೇರಿ ಬೂತ್ ನಂಬ್ರ 19 ಪಿಲಾತ್ತರ, ಬೂತ್ ನಂಬ್ರ 69 ಪುದಿಯಂಗಾಡಿ ಜುಮಾಅತ್ ಎಚ್‍ಎಸ್ ನೋರ್ತ್ ಬ್ಲಾಕ್, ಬೂತ್ ನಂಬ್ರ 70 ಜುಮಾಅತ್ ಎಚ್‍ಎಸ್ ಸೌತ್ ಬ್ಲಾಕ್‍ಗಳಲ್ಲಿ ಮತ್ತು ಕಣ್ಣೂರು ತಳಿಪರಂಬ ಬೂತ್ ನಂಬ್ರ 166 ಪಾಂಬುರುತ್ತಿ ಮಾಪ್ಪಿಳ್ಳ ಎಯುಪಿಎಸ್‍ನಲ್ಲಿ ಮರುಮತದಾನ ನಡೆಯಲಿದೆ.
ಮೇ 19 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಲಿದೆ. ಈ ನಾಲ್ಕು ಬೂತ್‍ಗಳಲ್ಲಿ ಏ.23 ರಂದು ನಡೆದ ಮತದಾನವನ್ನು ಚುನಾವಣಾಧಿಕಾರಿ ರದ್ದುಗೊಳಿಸಿದ್ದಾರೆ.