ಬದಿಯಡ್ಕ: ಶತಮಾನಗಳಿಂದ ಜನಸೇವೆಯಲ್ಲಿ ತೊಡಗಿಕೊಂಡು ಊರಿನ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ಶತಮಾನೋತ್ಸವ ಸಮಾರಂಭವು ಇಂದು (ಜೂ.1) ಬೆಳಗ್ಗೆ 9.30ರಿಂದ ರಾತ್ರಿಯ ತನಕ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜರಗಲಿದೆ. ಕ್ಲಾಸ್ 1 ಫಸ್ಟ್‍ಗ್ರೇಡ್ ಬ್ಯಾಂಕ್ ಆಗಿ ಭಡ್ತಿ ಹೊಂದಿದ ಬ್ಯಾಂಕ್‍ನಲ್ಲಿ ನೂತನವಾಗಿ ಲಾಕರ್ ವ್ಯವಸ್ಥೆ, ನೂತನ ಕಟ್ಟಡದ ಉದ್ಘಾಟನೆ ನಡೆಯಲಿರುವುದು. ಬ್ಯಾಂಕ್‍ನ ಮಾಹಿತಿಗಳು, ಸಹಕಾರಿ ವಲಯಕ್ಕೆ ಸಂಬಂಧಿಸಿದ ಲೇಖನಗಳು ಒಳಗೊಂಡ ಸ್ಮರಣ ಸಂಚಿಕೆ `ಶತ ಸಹಕಾರ ಪಥ'ವು ಈ ಸಂದರ್ಭದಲ್ಲಿ ಬಿಡುಗೊಳ್ಳಲಿದೆ.
ಬೆಳಿಗ್ಗೆ 9.30ಕ್ಕೆ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಧ್ವಜಾರೋಹಣಗೈಯಲಿರುವರು. ಬ್ಯಾಂಕ್‍ನ ಹಿರಿಯ ಸದಸ್ಯ ಕಾನತ್ತಿಲ ಮಹಾಲಿಂಗಭಟ್ ದೀಪಜ್ವಲನೆಯೊಂದಿಗೆ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಿರುವರು. ಬ್ಯಾಂಕ್‍ನ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಲಿರುವರು.
ನವೀಕೃತ ಕಟ್ಟಡವನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸಲಿದ್ದಾರೆ. ಕನ್ನಡದೋಜ ದಿ.ಪೆರಡಾಲ ಕೃಷ್ಣಯ್ಯ, ದಿ.ಈಶ್ವರ ಭಟ್ ಖಂಡಿಗೆ, ದಿ.ಮಹಾಲಿಂಗಭಟ್ ಖಂಡಿಗೆ, ದಿ. ಖಂಡಿಗೆ ನಾರಾಯಣ ಭಟ್ ಕೇರ, ದಿ.ಶ್ಯಾಮ ಭಟ್ ಖಂಡಿಗೆ, ದಿ. ಖಂಡಿಗೆ ಶ್ರೀಕೃಷ್ಣ ಭಟ್ ಕೇರ ಅವರ ಭಾವಚಿತ್ರಗಳ ಅನಾವರಣ ನಡೆಯಲಿದೆ. ಸಾಯಿರಾಂ ಗೋಪಾಲಕೃಷ್ಣ ಭಟ್, ವಿ.ಶ್ರೀಕೃಷ್ಣ ಭಟ್, ಪಡಿಯಡ್ಪು ಶಂಕರ ಭಟ್, ಐತ್ತಪ್ಪ ಶೆಟ್ಟಿ ಕಡಾರು, ಕೋರಿಕ್ಕಾರು ವಿಷ್ಣು ಭಟ್, ಶ್ರೀಧರ ಪೈ ಬಳ್ಳಂಬೆಟ್ಟು ಭಾವಚಿತ್ರ ಅನಾವರಣಗೊಳಿಸಲಿದ್ದಾರೆ.
ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜ್ಯೋತೀಷ್ ಜಗನ್ನಾದ್, ಭದ್ರತಾ ಕೋಶವನ್ನು ಮಹಮ್ಮದ್ ನೌಶಾದ್, ಕೇಶ್ ಕೌಂಟರ್‍ನ್ನು ನ್ಯಾಯವಾದಿ ಕೆ.ಶ್ರೀಕಾಂತ್, ಭದ್ರತಾ ಕೋಶ (ಸಾಮಾನ್ಯ)ವನ್ನು ಜಯಚಂದ್ರನ್, ರುಪೇ ಕಾರ್ಡ್ ಅನಿಲ್ ಕುಮಾರ್ ಎ. ಉದ್ಘಾಟಿಸಲಿದ್ದಾರೆ. ಅವಿನಾಶ್ ವಿ.ರೈ, ಪ್ರೇಮ ಕುಮಾರಿ,ಎಸ್.ಜೆ.ಪ್ರಸಾದ್, ವೆಂಕಟ್ರಮಣ ಸಿ. ಶುಭಾಶಂಸನೆಗೈಯ್ಯುವರು. 12 ಗಂಟೆಯಿಂದ ನಡೆಯುವ ವಿಚಾರಗೋಷ್ಠಿಯಲ್ಲಿ ನಿರಂಜನ ರಾಜ್ ಅರಸ್, ವಿ.ಎನ್. ಬಾಬು ಪ್ರಬಂಧ ಮಂಡಿಸಲಿದ್ದಾರೆ. ಕುಂಞÂಕೃಷ್ಣನ್, ಐತ್ತಪ್ಪ ಮವ್ವಾರು, ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ಶಿವರಾಮ ಭಟ್ ಎಚ್. ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 2 ಗಂಟೆಗೆ ಶ್ರೀ ನಟರಾಜ ಶರ್ಮ ಬಳ್ಳಪದವು ಮತ್ತು ಬಳಗದವರಿಂದ ಭಾವಸಂಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ 3.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯಲ್ಲಿ ಕೋಂಕೋಡಿ ಪದ್ಮನಾಭ, ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬ್ಯಾಂಕ್‍ನ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸಿಬ್ಬಂದಿ ವರ್ಗಕ್ಕೆ ಮತ್ತು ರ್ಯಾಂಕ ವಿಜೇತ ವಿದ್ಯಾರ್ಥಿಗಳಿಗೆ, ನೂತನ ಕಟ್ಟಡ ವಾಸ್ತುಶಿಲ್ಪಿ ಕೆ.ಎನ್.ಭಟ್, ಕಟ್ಟಡದ ಗುತ್ತಿಗೆದಾರ ರಾಜು ಸ್ಟೀಫನ್ ಕ್ರಾಸ್ತ ಬೇಳ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ. ಹರೀಶ್ ಕುಮಾರ್ ಕೆ.ಗ್ರೂಪ್ ಇನ್ಶೂರೆನ್ಸ್ ಉದ್ಘಾಟಿಸಲಿದ್ದಾರೆ. ಶಂಕರನಾರಾಯಣ ಭಟ್ ಪೆರುಮುಂಡ, ಗಣಪತಿ ಕೋಟೆಕಣಿ, ಎಂ.ಸಂಜೀವ ಶೆಟ್ಟಿ, ಝಾನ್ಸಿ ಕೆ.ಪಿ., ಪಿ.ಕೆ.ಬಾಲಕೃಷ್ಣನ್, ಪದ್ಮರಾಜ ಪಟ್ಟಾಜೆ, ಉದನೇಶವೀರ, ಚಂದ್ರಶೇಖರ ಶೆಟ್ಟಿ, ಥೋಮಸ್ ಡಿಸೋಜ, ಮಹಮ್ಮದ್ ಕುಂಜಾರು, ಸುಬ್ರಹ್ಮಣ್ಯ ಭಟ್ ಎಂ., ವಿನೋದ್ ಕುಮಾರ್ ಪಿ.ಕೆ. ಶುಭಾಶಂಸನೆಗೈಯಲಿದ್ದಾರೆ. ಸಂಜೆ 6ರಿಂದ ನೀರ್ಚಾಲು ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಚಕ್ರೇಶ್ವರ ಪರೀಕ್ಷಿತ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.